ಉಪಪತ್ನಿ ಹೊಂದಿರುವವರೂ ಬಿಜೆಪಿಯ ಪ್ರಶ್ನಿಸುತ್ತಾರಾ!?

ಲಕ್ಷ್ಣಣ ಸವದಿಯ ವಿವೇಕರಹಿತ ಕೆಲಸದಿಂದ ಬಿಜೆಪಿಗೆ ಮುಜುಗರವಾಗಿದೆ. ಇದಕ್ಕಾಗಿ ರಾಜ್ಯದ ಜನರನ್ನು ಕ್ಷಮೆ ಕೇಳುತ್ತೇನೆ. ಆದರೆ ಬಿಜೆಪಿ ಸಂಸ್ಕೃತಿ ಕುರಿತು ವಿವಿಧ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್, ಜನತಾದಳದ ಸಂಸ್ಕೃತಿ ಏನೆನ್ನುವುದು ಈ ದೇಶದ ಜನರಿಗೆ ಗೊತ್ತಿದೆ ಆ ಪಕ್ಷಗಳ ನೇತಾರರ ಹೆಸರುಗಳನ್ನು ಪ್ರಸ್ತಾಪಿಸದೆ ಕುಟುಕಿದರು.
ಹೆಣ್ಣಿಗೆ ಸಮಾನವಾಗಿ ನಡೆದುಕೊಳ್ಳಲು ಅವಕಾಶ ನೀಡದಿರುವುದು ಈ ದೇಶದ ದುರಂತ. ಆದೇ ರೀತಿ ವರದಕ್ಷಿಣೆ ಪಡೆಯುವುದು ಎಷ್ಟು ತಪ್ಪೋ ತಲಾಕ್ ಕೂಡ ಅಷ್ಟೇ ಅಪಾಯಕಾರಿ. ಈ ಎಲ್ಲಾ ವಕ್ರತೆಗಳನ್ನು ಮೀರಿದ ಸಮಾಜ ನಿರ್ಮಾಣವಾಗಬೇಕು ಎಂದು ರವಿ ಆಶಿಸಿದರು.
ಮಡೆಸ್ನಾನ ಮತ್ತು ಪಂಕ್ತಿ ಭೋಜನ ಎರಡೂ ಅಸಹ್ಯ. ಆದರೆ ಇವುಗಳಿಗಿಂತಲೂ ಹೆಣ್ಣು ಮಕ್ಕಳಿಗೆ ಬುರ್ಕಾ ಧರಿಸುವುದನ್ನು ಕಡ್ಡಾಯಗೊಳಿಸಿರುವುದು ದೊಡ್ಡ ತಪ್ಪು. ಈ ಬಗ್ಗೆ ಏಕೆ ಸಾಮಾಜಿಕ ಚರ್ಚೆ ಮಾಡುತ್ತಿಲ್ಲ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಪ್ರಶ್ನಿಸಿದ್ದಾರೆ.











Click it and Unblock the Notifications