ಮಸೀದಿ ಕಟ್ಟಿಸಿಕೊಡುತ್ತೇನೆ: ಬಿಜೆಪಿ ಸಾರಥಿ ಗಡ್ಕರಿ
ಚಂಡೋಲಿ,
ಫೆ.9: ಅತ್ತ ರಥ ಸಾರಥ್ಯದ ನಾಯಕ ಎಲ್ ಕೆ ಅಡ್ವಾಣಿ ಅವರು ರಾಮಮಂದಿರ ನಿರ್ಮಾಣವಾದರೆ ನನ್ನ ಜೀವನ ಧನ್ಯ ಎನ್ನುತ್ತಿರುವಾಗಲೇ ಅವರದೇ ಬಿಜೆಪಿ ಪಕ್ಷದ ಹಾಲಿ ಸಾರಥಿ ನಿತಿನ್ ಗಡ್ಕರಿ ಸಾಹೇಬರು ಮಸೀದಿ ಕಟ್ಟಿಕೊಡುವುದಾಗಿ ತಮ್ಮ ಮಸ್ಲಿಂ ಬಾಂಧವರಿಗೆ ಭರವಸೆ ನೀಡಿದ್ದಾರೆ. id="toptextpromo">ಆದರೆ
ಷರತ್ತು ಅನ್ವಯಿಸುತ್ತದೆ ಎನ್ನುವ ಹಾಗೆ ನೀವು ಅಯೋಧ್ಯಾದಲ್ಲಿ ಬೃಹತ್ ರಾಮಮಂದಿರ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟರೆ ನಾನೇ ಖುದ್ದು ನಿಂತು ನಿಮಗಾಗಿ ಮಸೀದಿ ನಿರ್ಮಿಸಿಕೊಡುವೆ ಎಂದು ಚುನಾವಣೆ ಕಾಲದಲ್ಲಿ ಆಶ್ವಾಸನೆ ನೀಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಕಾಂಗ್ರೆಸ್
ಪಕ್ಷ ಮುಸ್ಲಿಮರಿಗಾಗಿ ಶೇ. 9ರ ಮೀಸಲಾತಿ ನೀಡುವುದಾಗಿ ಹೇಳುತ್ತಿದೆ. ಆದರೆ ವಿಧಾನಸಭೆ ಚುನಾವಣೆ ಕಾಲದಲ್ಲಿ ನಾನು ಆಶ್ವಾಸನೆ ನೀಡುತ್ತೇನೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ದಲಿತರು ಮತ್ತು ಇತರೆ ಹಿಂದುಳಿದ ವರ್ಗದವರಿಗಾಗಿ ಮೀಸಲಾತಿ ಪ್ರಮಾಣವನ್ನು ಕಡಿತಗೊಳಿಸುವುದಿಲ್ಲ ಎಂದು ಪ್ರಚಾರ ಸಭೆಯಲ್ಲಿ ಗಡ್ಕರಿ ಹೇಳಿದರು.











Click it and Unblock the Notifications