ಸಕಲೇಶಪುರ ಘಾಟ್: ಆಂಧ್ರ ಚಿನ್ನದ ವ್ಯಾಪಾರಿ ಶವ ಪತ್ತೆ
ಬೆಂಗಳೂರು,
ಫೆ.7: ದೇವನಹಳ್ಳಿ ವಿಮಾನ ನಿಲ್ದಾಣದಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಆಂಧ್ರದ ಚಿನ್ನದ ವ್ಯಾಪಾರಿ, ಸಕಲೇಶಪುರ ಘಾಟ್ ನಲ್ಲಿ ಗುರುವಾರ ಬೆಳಗ್ಗೆ ಶವವಾಗಿ ಸಿಕ್ಕಿದ್ದಾರೆ. ಮಂಗವಾರ ಬೆಳಗ್ಗೆ 7 ಮಂದಿಯ ತಂಡ ಆಂಧ್ರದ ವ್ಯಾಪಾರಿ ಮನೋಜ್ ಕುಮಾರ್ ಗ್ರಂಥಿ (34) ಅವರನ್ನು ಅಪಹರಿಸಿತ್ತು. id="toptextpromo">ವ್ಯಾಪಾರ
ನಿಮಿತ್ತ ಮುಂಬೈಗೆ ತೆರಳಲು ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಮನೋಜ್ ಬಳಿ ಸುಮಾರು 3 ಕೋಟಿ ರುಪಾಯಿ ಚಿನ್ನಾಭರಣವಿತ್ತು ಎನ್ನಲಾಗಿದೆ. ಇದರ ಬೆನ್ನುಬಿದ್ದ ಪಾತಕಿಗಳು ಮನೋಜ್ ಅವರನ್ನು ಹತ್ಯೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಮನೋಜ್ ಆಂಧ್ರದ ಮಾಜಿ ಮುಖ್ಯಮಂತ್ರಿ ರೋಸಯ್ಯ ಅವರ ಸಂಬಂಧಿ ಎನ್ನಲಾಗಿದೆ. id='are-slot-1' class='oiad oi-axt oiadv'> id='top-searched-articles'>ವಿಶಾಖಪಟ್ಟಣದ
ವೈಭವ್ ಎಂಪೈರ್ ಜ್ಯುವೆಲರ್ಸ್ ಅಂಗಡಿಯ ಮಾಲೀಕ ಮನೋಜ್ ಫೆ. 6ರಂದು ಬೆಂಗಳೂರಿಗೆ ಭೇಟಿ ನೀಡಿದ್ದರು. ಖಾಸಗಿ ಹೋಟೆಲೊಂದರಲ್ಲಿ ತಂಗಿದ್ದ ಅವರು ನಗರದ ಕೆಲವು ಚಿನ್ನದ ವ್ಯಾಪಾರಿಗಳನ್ನು ಭೇಟಿ ಮಾಡಿದ್ದರು. ನಗರದಲ್ಲಿ ನಿವೇಶನ ಖರೀದಿಸುವ ಸಂಬಂಧವೂ ಅವರು ನಗರದಲ್ಲೆಲ್ಲ ಓಡಾಡಿದ್ದರು. ಮಂಗಳವಾರ ಬೆಳಗ್ಗೆ ಟ್ಯಾಕ್ಸಿಯಲ್ಲಿ ವಿಮಾನ ನಿಲ್ದಾಣಕ್ಕೆ ತೆರಳಿದ ಮನೋಜ್ ಆನಂತರ ಕಾಣೆಯಾಗಿದ್ದಾರೆ ಎಂದು ಅವರ ಸೋದರ ಸತೀಶ್ ಪೊಲೀಸರಿಗೆ ದೂರು ನಿಡಿದ್ದರು. ಇದೀಗ ಅವರ ಶವ ಪತ್ತೆಯಾಗಿದೆ.











Click it and Unblock the Notifications