ಪೋಲಿ ಸರದಾರರು ಭೂಗತ: ಸ್ಪೀಕರ್ ನೋಟಿಸ್

adult-movie-tainted-bjp-ministers-go-underground
ಬೆಂಗಳೂರು, ಫೆ.8: ವಿಧಾನಸಭೆಯನ್ನೇ ಅಡ್ಡೆಯಾಗಿಸಿಕೊಂಡು ಅಶ್ಲೀಲ ಚಿತ್ರ ಎಂಜಾಯ್ ಮಾಡಿದ ಸಚಿವ ಲಕ್ಷಣ ಸವದಿ, ಸಿಸಿ ಪಾಟೀಲ್ ಮತ್ತು ಕೃಷ್ಣ ಪಾಲೇಮಾರ್ ಭೂಗತರಾಗಿದ್ದಾರೆ. ರಾಜ್ಯದ ವರಿಷ್ಠರಿಗೆ ರಾತ್ರಿಯೆಲ್ಲ ತಮ್ಮ ಕಾಮಾಯಣವನ್ನು ವಿವರಿಸಿ, ಅವರನ್ನು ಒಲಿಸಿಕೊಳ್ಳಲು ಪ್ರಯಾಸ ಪಟ್ಟ ತಿಳಿಗೇಡಿ ತ್ರಿಮೂರ್ತಿಗಳು ಮಂಗಳವಾರ ಬೆಳಗ್ಗೆಯಿಂದ ನಾಪತ್ತೆಯಾಗಿದ್ದಾರೆ.

ಸ್ಪೀಕರ್ ಬೋಪಯ್ಯ ನೋಟಿಸ್: ಅತ್ತ ದೆಹಲಿಯಿಂದ ಪಕ್ಷದ ವರಿಷ್ಠರು ಖಡಕ್ ಆದೇಶ ಹೊರಡಿಸುತ್ತಿದ್ದಂತೆ ರಾಜ್ಯ ವರಿಷ್ಠರೂ ಕೈಚೆಲ್ಲಿದ್ದರು. ಇದರಿಂದ ಧರಾಶಾಹಿಗಳಾದ ತ್ರಿಮೂರ್ತಿಗಳು ಬೆಳಗ್ಗೆ 8 ಗಂಟೆಗೆ ರಾಜ್ಯದ ವರಿಷ್ಠರ ಎದುರು ಮತ್ತೊಮ್ಮೆ ಹಾಜರಾಗಿದ್ದರು. ಆ ಸಂದರ್ಭದಲ್ಲಿ ರಾಜೀನಾಮೆ ಒಗಾಯಿಸಿ, ನಿರ್ಗಮಿಸಿದ ಸವದಿ, ಪಾಟೀಲ್ ಮತ್ತು ಪಾಲೇಮಾರ್ ನಂತರ ಈ ಕ್ಷಣದವರೆಗೂ ಎಲ್ಲೂ ಕಾಣಿಸಿಕೊಂಡಿಲ್ಲ.

ಕಳಂಕಿತ ತ್ರಿಮೂರ್ತಿಗಳು ವಿಧಾನಸಭೆಗೆ ಹಾಜರಾಗುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದವು. ಇದರಿಂದ ಅವರು ವಿಧಾನಸೌಧದತ್ತ ಹೆಜ್ಜೆ ಹಾಕದೇ ಹೋದರು. ಅತ್ತ ತಮ್ಮ ಸ್ವಕ್ಷೇತ್ರಗಳಲ್ಲಿ ಜನರು ತೀವ್ರವಾಗಿ ಆಕ್ರೋಶಗೊಂಡಿರುವುದನ್ನು ತಿಳಿದು ಅಲ್ಲಿಗೂ ತೆರಳಿಲ್ಲ. ಅವರ ಮೊಬೈಲುಗಳು ಸ್ವಿಚ್ ಆಫ್ ಆಗಿದ್ದು, ನಿಗೂಢ ಸ್ಥಳ ಸೇರಿಕೊಂಡಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಈ ಮಧ್ಯೆ, ಮೂವರೂ ಕಳಂಕಿತರಿಗೆ ಸದನಕ್ಕೆ ಹಾಜರಾಗದಂತೆ ನಿರ್ಬಂಧ ಹೇರಲಾಗಿದೆ. ಜತೆಗೆ ಫೆ. 13 ರೊಳಗಾಗಿ ಪ್ರಕರಣದ ಕುರಿತು ಉತ್ತರಿಸುವಂತೆ ಸೂಚಿಸಿ ಸ್ಪೀಕರ್ ಬೋಪಯ್ಯ ನೋಟಿಸ್ ಸಹ ಜಾರಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+