ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಹೈಸ್ಕೂಲ್ ಪಠ್ಯದಲ್ಲಿ ಲೈಂಗಿಕ ಶಿಕ್ಷಣ

By Srinath
|
Google Oneindia Kannada News

sex-education-in-karnataka-schools
ಬೆಂಗಳೂರು, ಫೆ.7: ರಾಜ್ಯ ಸರಕಾರ ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲಾ ಪಠ್ಯದಲ್ಲಿ ಲೈಂಗಿಕ ಶಿಕ್ಷಣ ಜಾರಿಗೆ ತರಲು ನಿರ್ಧರಿಸಿದೆ. ಸಂಬಂಧಪಟ್ಟ ಅಧಿಕಾರಿಗಳು ಪಠ್ಯವನ್ನು ಅಂತಿಮಗೊಳಿಸಿದ್ದಾರೆ. ಆರಂಭದಲ್ಲಿ ಈ ಶಿಕ್ಷಣವನ್ನು ಹೈಸ್ಕೂಲಿಗೆ ಸೀಮಿತಗೊಳಿಸಲಾಗುವುದು.

16 ಗಂಟೆ ಕಾಲದ ಈ ಲೈಂಗಿಕ ಶಿಕ್ಷಣದಲ್ಲಿ ಹದಿಹರಯದ ಜ್ಞಾನ, ಲೈಂಗಿಕವಾಗಿ ಹರಡುವ ಖಾಯಿಲೆಗಳು, ಏಡ್ಸ್ ಬಗ್ಗೆ ಅರಿವು ಮತ್ತಿತರ ವಿಷಯಗಳ ಬಗ್ಗೆ ಚರ್ಚೆ ಇರುತ್ತದೆ. ಅದಕ್ಕೂ ಮೊದಲು ಶಿಕ್ಷಕ ವರ್ಗಕ್ಕೆ ಇದರ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಲಿದೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

ಲೈಂಗಿಕ ಅಪರಾಧಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಲು ದೇಶಾದ್ಯಂತ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ನೀಡಬೇಕು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿಯ ಸಂಸದೀಯ ಸ್ಥಾಯಿ ಸಮಿತಿಯೊಂದು 2011ರಲ್ಲಿ ಸಲಹೆ ನೀಡಿತ್ತು. ಅದರನ್ವಯ ಕರ್ನಾಟಕದಲ್ಲಿ ಇದು ಜಾರಿಗೆ ತರಲು ನಿರ್ಧರಿಸಲಾಗಿದೆ. ಆದರೆ ಗುಜರಾತ್ ಮತ್ತು ಮಧ್ಯಪ್ರದೇಶ ರಾಜ್ಯಗಳು ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ಅಳವಡಿಕೆಗೆ ವಿರೋಧ ವ್ಯಕ್ತಪಡಿಸಿವೆ. ಕರ್ನಾಟಕದಲ್ಲಿ ಈ ವಿಷಯದ ಬಗ್ಗೆ ಸಹಜವಾಗಿಯೇ ಪರ-ವಿರೋಧ ಕೂಗುಗಳು ಎದ್ದಿವೆ.

English summary
The Karnataka State government is all set to introduce sex education in school curricula (High School level) from the next academic year. A Parliamentary Standing Committee on Human Resources Development, which looked into the Sexual Offences Bill, had suggested this recently.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X