• search

2008ರ ಬಿಕ್ಕಟ್ಟಿಗೆ ಬಿಸಿನೆಸ್ ಸ್ಕೂಲ್ ಕಾರಣವಲ್ಲ : ಸೌಮಿತ್ರ

By * ರಾಜೀವ್ ಗೌಡ, ಬೆಂಗಳೂರು
Subscribe to Oneindia Kannada
For Quick Alerts
ALLOW NOTIFICATIONS
For Daily Alerts
  Soumitra Dutta
  ಅಂತಾರಾಷ್ಟ್ರೀಯ ಬಿಸಿನೆಸ್ ಸ್ಕೂಲ್ ಅಮೆರಿಕಾದ ಕಾರ್ನೆಲ್ ಜಾನ್ಸನ್ ಗ್ರಾಡ್ಯುಯೇಟ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ಗೆ ಡೀನ್ ಆಗಿ ಆಯ್ಕೆಯಾಗಿರುವ ಸೌಮಿತ್ರ ದತ್ತಾ ಅವರ ಸಂದರ್ಶನವನ್ನು ಒನ್ಇಂಡಿಯಾ ಪ್ರಸ್ತುತಪಡಿಸುತ್ತಿದೆ. ಸಂದರ್ಶನ ಮಾಡಿದವರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್-ಬೆಂಗಳೂರು ವಿದ್ಯಾಸಂಸ್ಥೆಯಲ್ಲಿ ಪ್ರೊಫೆಸರಾಗಿರುವ ರಾಜೀವ್ ಗೌಡ. ವಾರ್ಟನ್ ಮತ್ತು ಬರ್ಕಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದ ರಾಜೀವ್ ಗೌಡ ಶಿಕ್ಷಣ, ಆಡಳಿತ ವಿಷಯದಲ್ಲಿ ಆಸೀಮ ಆಸಕ್ತಿಯನ್ನು ಹೊಂದಿದ್ದಾರೆ.

  ಒಬ್ಬ ಭಾರತೀಯನಾಗಿ, ಭಾರತದಲ್ಲಿಯೇ ಬೆಳೆದದ್ದು ನಿಮ್ಮ ವೃತ್ತಿಯಲ್ಲಿ ಮೇಲೇರಲು ಹೇಗೆ ಸಾಧ್ಯವಾಯಿತು? ಮನಸ್ಥಿತಿ ಹೇಗಿತ್ತು, ಅನುಭವಗಳೇನು?

  ನಮ್ಮ ತಂದೆ ಭಾರತೀಯ ವಾಯುದಳದಲ್ಲಿ ವೈದ್ಯರಾಗಿದ್ದರು ಮತ್ತು ತಾಯಿ ಮನೆಯ ಕಾರುಭಾರವನ್ನು ನಿಭಾಯಿಸುತ್ತ ಕುಟುಂಬದ ಏಳ್ಗೆ ಸಮರ್ಪಿಸಿಕೊಂಡಿದ್ದರು. ತಂದೆ ಏರ್ ಫೋರ್ಸ್‌ನಲ್ಲಿ ಇದ್ದದ್ದರಿಂದ ದೆಹಲಿ, ಜೋರ್ಹಟ್ ಮತ್ತು ಬೆಂಗಳೂರು ಸೇರಿದಂತೆ ಭಾರತದ ಅನೇಕ ನಗರಗಳಲ್ಲಿ ಆರಂಭದ ಜೀವನ ಕಳೆದೆ ಮತ್ತು ಅನೇಕ ಸ್ನೇಹಿತರನ್ನು ಸಂಪಾದಿಸಿದೆ. ವಿಭಿನ್ನ ಸಂಸ್ಕೃತಿ ಎಂಬದು ನನ್ನ ಡಿಎನ್ಎದಲ್ಲಿಯೇ ಸಮ್ಮಿಳಿತಗೊಂಡಿದೆ. ಇದು ವಿಭಿನ್ನ ದೇಶಗಳಲ್ಲಿ, ವಿಭಿನ್ನ ಸಾಂಸ್ಕೃತಿಕ ವಾತಾವರಣದಲ್ಲಿ ಒಬ್ಬ ಅಂತಾರಾಷ್ಟ್ರೀಯ ಶಿಕ್ಷಣತಜ್ಞನಾಗಿ ಬೆಳೆಯಲು ಸಹಕಾರಿಯಾಯಿತು. ನಾಯಕನಿಗಿರಬೇಕಾದ ಗುಣಗಳು ನನ್ನಲ್ಲಿವೆಯೆಂದರೆ ಅದಕ್ಕೆ ಮಾನವೀಯ ಸಂಬಂಧಗಳು ಮೌಲ್ಯವನ್ನು ಕಲಿಸಿದ ನನ್ನ ತಾಯಿಯೇ ಸ್ಫೂರ್ತಿ.

  ಹಲವಾರು ದಶಕಗಳ ಕಾಲ ಭಾರತದಿಂದ ಹೊರಗಿದ್ದಿರಿ. ಈಗ ಭಾರತದ ಜೊತೆ ಸೇತುವೆ ಕಟ್ಟುವಿರಿ?

  ಎರಡು ಮೂರು ತಿಂಗಳಿಗೊಮ್ಮೆ ಭಾರತಕ್ಕೆ ಬರುತ್ತಲೇ ಇರುತ್ತೇನೆ. ನನ್ನ ತಂದೆತಾಯಿ ಮತ್ತು ಸಹೋದರಿ ದೆಹಲಿಯಲ್ಲಿದ್ದಾರೆ ಮತ್ತು ದೇಶದೆಲ್ಲೆಡೆ ಸ್ನೇಹಿತರಿದ್ದಾರೆ. ಅಲ್ಲದೆ, ಸಿಐಐನಂಥ ಭಾರತೀಯ ಸಂಸ್ಥೆ ಮತ್ತು ಇನ್ಫೋಸಿಸ್ ಜೊತೆ ಕೆಲಸ ಮಾಡುತ್ತಲೇ ಬಂದಿದ್ದೇನೆ. ಭಾರತವನ್ನು ನಾನು ಯಾವತ್ತೂ ಬಿಟ್ಟಿಲ್ಲ.

  ಯುರೋಪಿಗೆ ಹೋಲಿಸಿದರೆ ಅಮೆರಿಕಾದ ವಿದ್ಯಾಸಂಸ್ಥೆಗಳು ಹೊರಗಿನ ಪ್ರತಿಭೆಗಳಿಗೆ ಪ್ರಾಶಸ್ಯ ನೀಡುತ್ತವೆ. ಹೀಗಿರುವಾಗ ಯುರೋಪಿನ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉನ್ನತ ಸ್ಥಾನ ಅಲಂಕರಿಸಲು ಹೇಗೆ ಸಾಧ್ಯವಾಯಿತು? ಅಮೆರಿಕ ಕುರಿತಂತೆ ನಿಮ್ಮ ಅನಿಸಿಕೆಗಳೇನು?

  ಇತರ ಜಾಗತಿಕ ಶಾಲೆಗಳಿಗಿಂತ INSTEAD ಒಂದು ಅಂತಾರಾಷ್ಟೀಯ ಮಟ್ಟದ ಅತ್ಯುತ್ತಮ ಸಂಸ್ಥೆ. INSTEAD ಅಥವಾ ಇನ್ನಿತರ ಯುರೋಪಿನ ಸಂಸ್ಥೆಗಳು ಆಚೆಯ ಪ್ರತಿಭೆಗಳನ್ನು ಸ್ವಾಗತಿಸುತ್ತಿಲ್ಲ ಎಂದು ಅನ್ನಿಸುವುದಿಲ್ಲ. ವಸ್ತುಸ್ಥಿತಿಯೇನೆಂದರೆ, INSTEAD ಹೊರತುಪಡಿಸಿ ಇತರ ಬಿಸಿನೆಸ್ ಶಿಕ್ಷಣ ಸಂಸ್ಥೆಗಳು ಜಾಗತಿಕ ಪ್ರತಿಭಗಳನ್ನು ಸೆಳೆಯಲು ಪ್ರಯತ್ನಿಸುತ್ತಿಲ್ಲ ಮತ್ತು ಹಣಕಾಸಿನ ಕೊರತೆಯನ್ನೂ ಕಾಣುತ್ತಿವೆ. ಆದರೆ, ಈ ಚಿತ್ರಣ ಕ್ರಮೇಣ ಬದಲಾಗುತ್ತಿದೆ. ಯುರೋಪಿನ ಅನೇಕ ಸಂಸ್ಥೆಗಳನ್ನು ಸ್ಪರ್ಧಾತ್ಮಕ ಜಗತ್ತಿಗೆ ಜಿಗಿದಿದ್ದು, ಯುರೋಪೇತರ ಶಿಕ್ಷಕ ಮತ್ತು ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳುತ್ತಿವೆ.

  ನಿಮ್ಮ ಆಗಮನ ಕಾರ್ನೆಲ್ ವಿಶ್ವವಿದ್ಯಾಲಯ ಜಾಗತಿಕ ಮಟ್ಟಕ್ಕೆ ಏರಿರುವುದರ ಹೆಗ್ಗುರುತು ಎಂದು ಕಾರ್ನೆಲ್ ಅಧ್ಯಕ್ಷ ಹೊಗಳಿದ್ದಾರೆ. ಇದರ ಬಗ್ಗೆ ಹೆಚ್ಚಿನ ವಿವರ ನೀಡುತ್ತೀರಾ? INSTEADನ ಅನೇಕ ಶಾಖೆಗಳಿರುವಂತೆ ನ್ಯೂಯಾರ್ಕ್ ಆಚೆಯೂ ಕಾರ್ನೆಲ್ ಸಂಸ್ಥೆ ಶಾಖೆಗಳನ್ನು ತೆರೆಯುವುದೆ?

  ಒಂದು ಜಾಗತಿಕ ಸಂಸ್ಥೆಯಾಗಿರುವ ಕಾರ್ನೆಲ್ ಭಾರತ ಸೇರಿದಂತೆ ಜಗತ್ತಿನ ಅನೇಕ ರಾಷ್ಟ್ರಗಳೊಂದಿಗೆ ಸಂಪರ್ಕ ಹೊಂದಿದೆ. ಭವಿಷ್ಯದ ದೃಷ್ಟಿಯಿಂದ ಅಮೆರಿದ ಹೊರಗಡೆ ಜಾನ್ಸನ್ ಸಂಸ್ಥೆಗೆ ಡೀನ್ ಹುಡುಕುವ ಅಗತ್ಯವಿದೆ. ಕಾರ್ನೆಲ್ ಸಂಸ್ಥೆಯನ್ನು ಜಗತ್ತಿನೆಲ್ಲೆಡೆ ಕೊಂಡೊಯ್ಯುವುದು ಮತ್ತು ಇಡೀ ಜಗತ್ತನ್ನು ಕಾರ್ನೆಲ್‌ಗೆ ತೆಗೆದುಕೊಂಡು ಬರುವುದು ನನ್ನು ಗುರಿ. ಇದು ಹೇಗೆ ಸಾಧ್ಯವಾಗುತ್ತದೆಂಬುದನ್ನು ಕೆಲ ತಿಂಗಳುಗಳಲ್ಲಿ ಜಾನ್ಸನ್ ಸಂಸ್ಥೆಯ ಸಿಬ್ಬಂದಿ, ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ.

  INSTEADನಲ್ಲಿ ಕೆಲಸ ನಿರ್ವಹಿಸಿ ಸಾಕಷ್ಟು ಅನುಭವವಿರುವ ನಿಮಗೆ, ಕಾರ್ನೆಲ್ ಯುರೋಪಿಗೆ ಕಾಲಿಡುವುದು ಎಂದು ಅನಿಸುತ್ತದೆಯೆ? ಯುರೋಪ್ ಮುಗ್ಗಟ್ಟಿನಲ್ಲಿರುವಾಗ ಇಂಥ ಹಜ್ಜೆ ಇಡುವುದು ತಪ್ಪಾಗುವುದಿಲ್ಲವೆ?

  ಯುರೋಪ್ ಸೇರಿದಂತೆ ಇತರ ಕಡೆಗಳಲ್ಲಿ ವಿಸ್ತರಿಸಲು ಕಾರ್ನೆಲ್ ಖಂಡಿತ ತನ್ನ ಗಮನ ಕೇಂದ್ರೀಕರಿಸುತ್ತದೆ. ವ್ಯಾಪಾರವೆಂಬುದು ಇಂದು ಜಾಗತಿಕವಾಗಿದೆ. ಯಾವುದೇ ದೇಶ ಅಥವಾ ಪ್ರಾದೇಶಿಕತೆಯ ಆಧಾರದ ಮೇಲೆ ವ್ಯಾಪಾರ ನಡೆಸಲು ಯಾವುದೇ ಕಂಪನಿ ಇಚ್ಛಿಸುವುದಿಲ್ಲ. ಇನ್ನು ಯುರೋಜೋನ್ ಹಣಕಾಸು ಮುಗ್ಗಟ್ಟು ತಾತ್ಕಾಲಿಕ ಮಾತ್ರ. ಇದು ಬಿಸಿನೆಸ್ ಶಿಕ್ಷಣ ಮುಂದುವರಿಸಲು ಯಾವುದೇ ಅಡೆತಡೆ ಒಡ್ಡುವುದಿಲ್ಲ.

  2008ರ ಹಣಕಾಸು ಮುಗ್ಗಟ್ಟು ಗಮನಿಸಿದರೆ, ಅತ್ಯುತ್ತಮ ಮತ್ತು ಅತ್ಯಂತ ಪ್ರತಿಭಾವಂತ ಗ್ರಾಜ್ಯುಯೇಟ್‌ಗಳೇ ಜಗತ್ತನ್ನು ಮುಗ್ಗಟ್ಟಿನಲ್ಲಿ ಮುಳುಗಿಸಿದರು. 2008ರ ಕರಾಳ ದಿನಗಳು ಮರುಕಳಿಸದಂತೆ ಎಂಬಿಎ ಪ್ರೋಗ್ರಾಮುಗಳನ್ನು ಯಾವರೀತಿ ಹಮ್ಮಿಕೊಳ್ಳಬಹುದು?

  2008ರ ಆರ್ಥಿಕ ಬಿಕ್ಕಟ್ಟಿಗೆ ಬಿಸಿನೆಸ್ ಶಾಲೆಗಳೇ ಕಾರಣ ಎಂದು ಹೇಳುವುದು ಸಮಂಜಸವಲ್ಲ. ಇದಕ್ಕೆ ಕಾರಣರಾದ ಹಲವರಲ್ಲಿ ಕೆಲವರು ಮಾತ್ರ ಎಂಬಿಎ ಪದವಿ ಹೊಂದಿದ್ದರು. ಆದರೆ, ಇಂಥ ವಿಪರೀತ ಸ್ಥಿತಿ ಎಂಬಿಎ ಶಿಕ್ಷಣದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಪ್ರಶ್ನೆ ಕೇಳಬಹುದು. ಇದಕ್ಕೆ ಯಾವುದೇ ದಿವ್ಯೌಷಧಿ ಇಲ್ಲದಿದ್ದರೂ, ಕೆಲ ಪ್ರಮುಖ ಅಂಶಗಳ ಬಗ್ಗೆ ಚಿಂತಿಸಬಹುದು - ಅ) ಸರಕಾರ ಮತ್ತು ಸಮಾಜವನ್ನು ಒಳಗೊಂಡ ವ್ಯವಸ್ಥೆಯ ವಿಶಾಲ ದೃಷ್ಟಿಕೋನ ಹೊಂದಬೇಕು; ಬ) ಬರೀ ಸಮಸ್ಯೆಗೆ ಪರಿಹಾರ ಕಂಡುಹಿಡುಯುವ ಬದಲು ಗಂಡಾಂತರ ಮತ್ತು ವಿಫಲತೆಯ ಬಗ್ಗೆಯೂ ಮುನ್ನೆಚ್ಚರಿಕೆ ಹೊಂದಿರಬೇಕು; ಕ) ಎಲ್ಲರಿಗೂ ಒಳ್ಳೆಯದಾಗುವಂತೆ ವ್ಯಾಪಾರವನ್ನು ಒಂದು ಶಕ್ತಿಯಾಗಿ ಮಾರ್ಪಡಿಸಬೇಕು.

  ಆನ್‌ಲೈನ್ ಜಗತ್ತು ಕೆಲಸ ಮತ್ತು ಜೀವನದ ರೂಪುರೇಷೆ ಹೇಗೆ ಬದಲಾಯಿಸಿದೆ ಎಂಬ ಬಗ್ಗೆ ನೀವು ಸಾಕಷ್ಟು ಅಧ್ಯಯನ ನಡೆಸಿದ್ದೀರಿ. ಕಾರ್ನೆಲ್ ಶಿಕ್ಷಣ ಸಂಸ್ಥೆಯಲ್ಲಿಯೂ ಈ ಅಂಶಗಳನ್ನು ಅಳವಡಿಸಿಕೊಳ್ಳುತ್ತೀರಾ?

  ತಂತ್ರಜ್ಞಾನ ನಮ್ಮ ಸುತ್ತಲಿನ ಜಗತ್ತನ್ನೇ ಬದಲಾಯಿಸುತ್ತಿದೆ. ಹಾಗೆಯೆ, ಶಿಕ್ಷಣದಲ್ಲಿಯೂ ಹೊಸ ನೀತಿಗಳನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿಯೂ ಕಂಪ್ಯೂಟರ್ ಮತ್ತು ಮಾಹಿತಿ ವಿಜ್ಞಾನದ ಅತ್ಯುತ್ತಮ ವಿಭಾಗಗಳಿವೆ. ಜಾನ್ಸನ್ ಶಾಲೆಯಲ್ಲಿ ಇವುಗಳ ಜೊತೆ ಕೈಗೂಡಿಸಿ ಹೆಚ್ಚಿನ ಪ್ರತಿಫಲ ಪಡೆಯಲು ಪ್ರಯತ್ನಿಸುತ್ತೇನೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  It is incorrect to put the “blame” for the 2008 crisis on business schools. Feels Soumitra Dutta, who was recently elevated to the enviable position as Dean of Cornell Johnson Graduate School of Management, New York, USA. Exclusive interview by Rajeev Gowda, an Indian Institute of Management-Bangalore professor.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more