ಮಸ್ತಕಾಭಿಷೇಕ ಸಮಾರೋಪ ಸಮಾರಂಭ ಚಿತ್ರಣ
ಬಾಹುಬಲಿಗೆ ಬಾಹುಬಲಿಯೇ ಸರಿಸಾಟಿ. ಅವನ ಎತ್ತರ, ಸೌಂದರ್ಯ, ಅತಿಶಯತೆ ಜಗತ್ತಿನ ಶಾಂತಿ ಬದುಕಿಗೆ ತುಷ್ಟಿ ಪುಷ್ಟಿ ನೀಡುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ಪ್ರಥಮ ಕಲಶವನ್ನು ಪಡೆದುಕೊಂಡ ಆರ್.ಕೆ.ಜೈನ್ ಮತ್ತು ಹಾಲಿ ಶಾಸಕ ಡಿ.ಸುಧಾಕರ್‌ರನ್ನು ಸನ್ಮಾನಿಸಲಾಯಿತು.[ಗ್ಯಾಲರಿ ನೋಡಿ]
ವೇದಿಕೆಯಲ್ಲಿ ಮುನಿಗಳು ಭುಜಬಲಿ ಚರಿತೆ ಎಂಬ ಗ್ರಂಥವನ್ನು ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ ಮೂಡಬಿದರೆ ಶಾಸಕ ಅಭಯಚಂದ್ರ ಜೈನ್, ಧನಂಜಯ ಕುಮಾರ್, ಎಂ.ಎನ್.ರಾಜೇಂದ್ರ ಕುಮಾರ್, ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್, ಡಿ.ಸುರೇಂದ್ರ ಕುಮಾರ್ ಉಪಸ್ಥಿತರಿದ್ದರು. ಸಕಲ ಕಾರ್ಯಕ್ರಮಗಳು ಸಾಂಗವಾಗಿ ನಿರ್ವಘ್ನವಾಗಿ ನೇರವೇರಿತು.
12 ವರ್ಷಕ್ಕೊಮ್ಮೆ ನಡೆಯುವ ಮಹಾಮಜ್ಜನದಿಂದ ವೇಣೂರಿನ 35 ಅಡಿ ಎತ್ತರದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಕಂಗೊಳಿಸುತ್ತಿದ್ದಂತೆ ಕಂಡು ಬಂತು. ಮಹಾಮಜ್ಜನ ಕಾರ್ಯಕ್ರಮ ಉದ್ಘಾಟಿಸಿದ್ದ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಜೈನ ಅಧ್ಯಯನ ಪೀಠ ಆರಂಭಿಸುವುದಾಗಿ ಘೋಷಿಸಿದ್ದು ಸಂತಸ ತಂದಿದೆ ಎಂದು ಜೈನ ಮುಖಂಡ ಪದ್ಮಪ್ರಸಾದ್ ಅಜಿಲ ಅವರು ಹೇಳಿದರು.













Click it and Unblock the Notifications