ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಟರ್ನೆಟ್‌ ವಿಶ್ವವಿದ್ಯಾಲಯ ಮುಂದಿನ ವರ್ಷದಿಂದ

By Srinath
|
Google Oneindia Kannada News

internet-meta-university-from-next-year-kapil-sibal
ನವದೆಹಲಿ,ಫೆ.4: ಮುಂದಿನ ವರ್ಷದಿಂದ ಇಂಟರ್ನೆಟ್‌ ಆಧಾರಿತ ವಿಶ್ವವಿದ್ಯಾಲಯಗಳು ಮುಂದಿನ ಶೈಕ್ಷಣಿಕ ವರ್ಷದಿಂದ ಕಾರ್ಯಾರಂಭ ಮಾಡಲಿವೆ. ಇದರಿಂದ ಯಾವುದೇ ಕೋರ್ಸ್‌ಗಳ ಕಟ್ಟುಪಾಡಿಲ್ಲದೆ ಯಾವುದೇ ವಿದ್ಯಾರ್ಥಿ ತನ್ನಿಚ್ಛೆಯ ಪದವಿ ಪಡೆಯಲು ಅವಕಾಶ ಲಭ್ಯವಾಗಲಿದೆ ಎಂದು ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ತಿಳಿಸಿದ್ದಾರೆ.

ಹಲವಾರು ವಿಶ್ವವಿದ್ಯಾಲಯಗಳು ಸೇರಿ ಈ ಮೆಟಾ ವಿವಿ ರೂಪುಗೊಳ್ಳಲಿದೆ. ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಇಚ್ಛೆಪಟ್ಟರೆ ಸಾಹಿತ್ಯದಲ್ಲಿ ಪದವಿ ಪಡೆಯಲು ಈ ವಿವಿ ಅನುವು ಮಾಡಿಕೊಡುತ್ತದೆ ಎಂದು ಅಮೆರಿಕ- ಭಾರತ ವಾಣಿಜ್ಯ ಪರಿಷತ್ತು ಜ್ಞಾನ ಸಂಯೋಗ ಕುರಿತು ಶುಕ್ರವಾರ ಏರ್ಪಡಿಸಿದ್ದ ಸಮಾವೇಶದಲ್ಲಿ ಪಾಲ್ಗೊಂಡು ಅವರು ತಿಳಿಸಿದರು.

ಈಗ ಈ ಪರಿಕಲ್ಪನೆಯ ಬಗ್ಗೆ ಬಹಳಷ್ಟು ಅನುಮಾನಗಳು ಇರಬಹುದು. ಆದರೆ ಭವಿಷ್ಯದಲ್ಲಿ ಇವು ಸಾಂಪ್ರದಾಯಿಕ ವಿವಿಗಳನ್ನು ಹಿಂದಿಕ್ಕಲಿವೆ ಎಂದು ಅವರು ಭವಿಷ್ಯ ನುಡಿದರು. ಶಿಕ್ಷಣದ ಸ್ವರೂಪವನ್ನು ಜಾಗತೀಕರಣಗೊಳಿಸಬೇಕೆಂಬುದು ಎಲ್ಲರ ಅಪೇಕ್ಷೆಯಾಗಿದೆ ಎಂದ ಸಿಬಲ್, ಭಾರತದಲ್ಲಿ ವಿದೇಶಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅವಕಾಶ ಕಲ್ಪಿಸುವ ಮಸೂದೆಗೆ ಶೀಘ್ರವೇ ಅಂಗೀಕಾರ ದೊರೆಯಲಿದೆ ಎಂದು ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

English summary
Human resource development minister Kapil Sibal on Friday (Feb 3) said a network of universities forming a meta university to allow students to pick courses from across disciplines from different institutions will be ready by the next academic session. Meta universities will create a platform in cyber space and ultimately the student will get a degree not from one but many universities, Sibal said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X