ಬೋಪಯ್ಯರಿಂದ ಕೊಲೆ ಬೆದರಿಕೆ: ಗೂಳಿಹಟ್ಟಿ ಗುಟುರು

ಕಪ್ಪು ಪಟ್ಟಿ ಧರಿಸಿದ್ದ ಗೂಳಿಹಟ್ಟಿ ಶೇಖರ್ ಅವರು ಸದನದಲ್ಲಿ ಸ್ಪೀಕರ್ ಅವರನ್ನು ಈ ರೀತಿ ಕರೆದಿದ್ದು ಆಡಳಿತ ಪಕ್ಷ, ವಿಪಕ್ಷಗಳ ವಾಕ್ಸಮರಕ್ಕೆ ನಾಂದಿ ಹಾಡಿತು.
ನಂತರ ಮಾತನಾಡಿದ ಗೂಳಿಹಟ್ಟಿ ಶೇಖರ್, ಬೋಪಯ್ಯ ಅವರ ಮೇಲೆ ಭಾರಿ ಆರೋಪ ಮಾಡಿದರು. ಗುರುವಾರ ಸಂಜೆ ತಮ್ಮ ಕಚೇರಿಗೆ ನನ್ನನ್ನು ಕರೆಸಿಕೊಂಡಿದ್ದರು. ಸ್ಪೀಕರ್ ಎಂದು ಗೌರವ ಕೊಟ್ಟು ಹೋಗಿದ್ದ ನನಗೆ ಅವಮಾನ ಮಾಡಲಾಗಿದೆ.
ಸಾಲದಕ್ಕೆ ದಲಿತ ಮುಖಂಡನೊಬ್ಬನಿಗೆ ಕೊಲೆ ಬೆದರಿಕೆ, ಧಮಕಿ ಹಾಕಿದ ಸಭಾಪತಿಗಳ ಬಗ್ಗೆ ನನಗೆ ಭಯವಿದೆ. ಕಳಂಕಿತರನ್ನು ಕಳಂಕಿತ ಎಂದು ಕರೆದರೆ ತಪ್ಪೇನಿದೆ ಎಂದು ಶಾಸಕ ಗೂಳಿಹಟ್ಟಿ ಶೇಖರ್ ಹೇಳಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.












Click it and Unblock the Notifications