ಗುಬ್ಬಿ ವೇದಿಕೆಯಲ್ಲಿ ಯಡಿಯೂರಪ್ಪ ಬ್ರಹ್ಮಾಸ್ತ್ರ

ಏನಾಯಿತಪಾ ಅಂದರೆ ಸಾಕ್ಷಾತ್ ಮಾಜಿ ಮುಖ್ಯಮಂತ್ರಿಯೇ ದೇವರಂತೆ ಎದುರಿಗೆ ಬಂದಿದ್ದಾರೆ. ಸರಕಾರಿ ಸೌಲಭ್ಯ ಕೇಳಲು ಇದು ಸುಸಮಯ ಎಂದು ಮಹಿಳೆಯೊಬ್ಬರು ಅಮಾಯಕವಾಗಿ ಭಾವಿಸಿದ್ದೇ ಯಡವಟ್ಟಾಯಿತು. ಆಕೆ ತನ್ನ ಮಗಳೊಂದಿಗೆ ವೇದಿಕೆ ಹತ್ತಿ ನಾಡಿನ ಮಾಜಿ ದೊರೆಗೆ ಅರ್ಜಿ ನೀಡಿ ಕಾಲಿಗೆ ಬಿದ್ದರು.
ಇದನ್ನು ಕಂಡು ಮಾಜಿ ಮುಖ್ಯಮಂತ್ರಿಗಳು ಕೆಂಡಮಂಡಲವಾದರು. ಅಲ್ಲೇ ನಿಂತಿದ್ದ ಮಹಿಳಾ ಡಿವೈಎಸ್ಪಿಯನ್ನು ವೇದಿಕೆಯಲ್ಲೇ ತರಾಟೆಗೆ ತೆಗೆದುಕೊಂಡರು. ಸಾಲದು ಅಂತ ಕೂಡಲೇ ಮಹಿಳೆಯನ್ನು ವೇದಿಕೆಯಿಂದ ಕೆಳಗೆ ಕಳುಹಿಸಿಯೇ ಬಿಟ್ಟರು. ಅರ್ಜಿ ಗತಿಯೇನಾಯಿತೋ ಆ ಚನ್ನಬಸವೇಶ್ವರನೇ ಬಲ್ಲ!
ಚನ್ನಬಸವೇಶ್ವರ ಆಣೆಗೂ ತಪ್ಪುಮಾಡಿಲ್ಲ: ಗುಬ್ಬಿ ಚನ್ನಬಸವೇಶ್ವರರ ಆಣೆಗೂ ನಾನು ಯಾವುದೇ ತಪ್ಪುಮಾಡಿಲ್ಲ. ಕಳೆದ ಮೂರು ವರ್ಷಗಳಲ್ಲಿ ವಿರೋಧಿಗಳ ಕಣ್ಣು ಕುಕ್ಕುವಂತಹ ಕೆಲಸ ಮಾಡಿದ್ದರಿಂದ ನನ್ನ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ ಅಧಿಕಾರದಿಂದ ಕೆಳಗೆ ಇಳಿಯುವಂತೆ ಮಾಡಿದರು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದೇ ವೇದಿಕೆಯಲ್ಲಿ ವಿಷಾದ ವ್ಯಕ್ತಪಡಿಸಿದರು.












Click it and Unblock the Notifications