ದೇಗುಲ ಧ್ವಂಸ, ಜೇಪಿ ಇನ್ಫ್ರಾ ಸಂಸ್ಥೆ ಮೇಲೆ FIR

ನಂಗ್ಲ ನಂಗ್ಲಿ ಗ್ರಾಮಸ್ಥ ವಿಜಯ್ ಚೌಹಾನ್ ಎಂಬುವವರು ದೂರು ನೀಡಿದ್ದಾರೆ. ಜೇಪಿ ಸಮೂಹ ಸಂಸ್ಥೆ ಅಧಿಕಾರಿಗಳು ದೇಗುಲದ ಪೂಜಾರಿಯನ್ನು ಹಿಡಿದಿಟ್ಟುಕೊಂಡು ಐದು ದಶಕಗಳಿಗೂ ಹಳೆಯದಾದ ದೇಗುಲ ಕಟ್ಟಡವನ್ನು ನಾಶ ಮಾಡಿದ್ದಾರೆ. ಗಿಡ ಮರಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ದೂರಲಾಗಿದೆ.
ಜೇಪಿ ಸಂಸ್ಥೆ ಎಂಡಿ, ಸಿಇಒ ಸಮೀರ್ ಗೌರ್, ಅಶೋಕ್, ದಿಲ್ಬಾಗ್ ಸಿಂಗ್ ಹಾಗೂ ಮಂಗಳ್ ಸಿಂಗ್ ಸೇರಿದಂತೆ ಹಲವು ಜನರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಜೇಪಿ ಸಂಸ್ಥೆಯ ವಕ್ತಾರರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲವಾದರೂ, ಸಂಸ್ಥೆಗೆ ಸೇರಿದ ಭೂಮಿಯನ್ನು ರೈತರು ಒತ್ತುವರಿ ಮಾಡಿದ್ದರು ಎಂದು ವಕ್ತಾರರು ಹೇಳಿಕೊಂಡಿದ್ದಾರೆ. ಈ ಬಗ್ಗೆ ದಾಖಲೆಗಳನ್ನು ಒದಗಿಸಿದ್ದಾರೆ. ತನಿಖೆ ಮುಂದುವರೆದಿದೆ ಎಂದು ನೋಯ್ಡಾ ಪೊಲೀಸರು ಹೇಳಿದ್ದಾರೆ.












Click it and Unblock the Notifications