• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಹಿಳೆ ಸೀರೆ ಉಡಬಾರದಾ? ಕ್ಯಾನ್ಸರ್ ಬರುತ್ತಂತೆ!

By Srinath
|
petticoat-knot-may-cause-sari-cancer-beware-women
ಬೆಂಗಳೂರು,ಜ.30: ಅನಾದಿ ಕಾಲದಿಂದಲೂ ಸೀರೆಯುಡುತ್ತಿರುವ ಮಹಿಳೆಗೆ ಆಘಾತಕಾರಿ ಸುದ್ದಿಯೊಂದು ತೇಲಿ ಬಂದಿದೆ. ಸೀರೆ ಮಹಿಳೆಗೆ ಸುರಕ್ಷಿತವಲ್ಲ. ಅದನ್ನು ಉಟ್ಟರೆ ಮಾರಕ ಕ್ಯಾನ್ಸರ್ ಬರುತ್ತೆ! ಇದು ನಿಜ. ನಂಬಿ ಪ್ಲೀಸ್, ಎನ್ನುತ್ತಿದೆ Indian Medical Associationನ ಖ್ಯಾತ ಮ್ಯಾಗಜೀನ್.

ನವೆಂಬರ್ 2011 ರಲ್ಲಿ ಪ್ರಕಟವಾಗಿರುವ ಲೇಖನದಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಮುಂಬೈನ ಗ್ರಾಂಟ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ವೈದ್ಯರು ಈ ರೀತಿಯೂ ಕ್ಯಾನ್ಸರ್ ಬರುತ್ತೆ ಅಂತ ಪತ್ತೆ ಹಚ್ಚಿದ್ದೇ ತಡ ಅದಕ್ಕೆ 'ಸ್ಯಾರಿ ಕ್ಯಾನ್ಸರ್' ಅಂತಲೂ ನಾಮಕರಣ ಮಾಡಿದ್ದಾರೆ.

ಇಲ್ಲಿನ ವೈದ್ಯರು ಸೊಂಟ ಅಥವಾ ಸ್ಯಾರಿ ಕ್ಯಾನ್ಸರ್ ಬಾಧಿತ ಮಹಿಳೆಯರನ್ನು ಇತ್ತೀಚೆಗೆ ಅಧ್ಯಯನಕ್ಕೊಳಪಡಿಸಿದ್ದರು. 'ಸೀರೆ ಮತ್ತು ಲಂಗವನ್ನು ಒಂದೇ ಭಾಗದಲ್ಲಿ, ನಿರಂತರವಾಗಿ ಉಟ್ಟುಕೊಳ್ಳುವುದರಿಂದ ಆ ಸೊಂಟದ ಪಟ್ಟಿಯಲ್ಲಿ ತೀವ್ರವಾದ ತುರಿಕೆ ಕಾಣಿಸಿಕೊಳ್ಳುತ್ತದೆ. ಅಲ್ಲಿ ಗಂಟು ಕಟ್ಟುವುದು ಅಥವಾ ಗಡ್ಡೆಯಾಗುವುದು ಆಗುತ್ತದೆ. ಮುಂದೆ ಅದು ಕ್ಯಾನ್ಸರಿಗೆ ಮಾರ್ಪಡುತ್ತದೆ. ಆದರೆ ಎಷ್ಟೋ ಮಹಿಳೆಯರಿಗೆ ಇದು ಗೊತ್ತಾಗೋದೇ ಇಲ್ಲ. ನಮಗೆ ಗೊತ್ತಾಗಿದೆ ಕಣ್ರಿ!' ಎಂದು ಅಶ್ವಿನಿ ಪುತ್ರರು ಹೇಳಿದ್ದಾರೆ.

ಕುತೂಹಲಕಾರಿ ಸಂಗತಿಯೆಂದರೆ ಅದೇ ಪುರುಷರು ಪ್ಯಾಂಟು ಅದರ ಮೇಲೆ ಬೆಲ್ಟು ಧರಿಸುವುದರಿಂದ ಏನೂ ಆಗೋಲ್ಲ. ಏಕೆಂದರೆ ಅಲ್ಲಿ ಒತ್ತಡ ಸುತ್ತಲೂ ಹರಡಿಕೊಳ್ಳುತ್ತದೆ. ಆದರೆ ಸೀರೆ ಮತ್ತು ಲಾಡಿ ಒತ್ತಡ ಅಧಿಕವಾಗಿದ್ದು, ಆ ಭಾಗದಲ್ಲಿ ರಕ್ತ ಹೆಪ್ಪು ಗಟ್ಟುತ್ತದೆ ಹುಷಾರು ಎಂದಿದ್ದಾರೆ ವೈದ್ಯ ಮಹಾಷಯರು.

ಇದರಿಂದ ಪಾರಾಗಲು ಲಾಡಿಯನ್ನು ಅಷ್ಟೊಂದು ಬಿಗಿಯಾಗಿ ಕಟ್ಟಿಕೊಳ್ಳಬೇಡಿ. ಅಥವಾ ಬೆಲ್ಟಿನಂತಹ ಅಗಲವಾದ ಪಟ್ಟಿಯನ್ನು ಕಟ್ಟಿಕೊಳ್ಳಿ. ದಾರದಂತ ಲಾಡಿ ಬೇಡ. ಅಷ್ಟಕ್ಕೂ ಸ್ಯಾರಿ ಕ್ಯಾನ್ಸರ್ ಬಂದರೆ ತಕ್ಷಣ ಅದನ್ನು ಗುರುತಿಸಿ, ಗುಣಪಡಿಸಬಹುದು ಅಂತಲೂ ವೈದ್ಯೋ ನಾರಾಯಣ ಹರಿ ಅಭಯ ನೀಡುತ್ತಾರೆ. ಯಾವುದಕ್ಕೆ ಆಗಲಿ ಜಾಗ್ರತೆ ಇರಲಿ ಹೆಂಗೆಳೆಯರೇ!

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
It seems that Indian traditional dress for women - Sari is no more safe for people as it may cause the dangerous and deadly disease - Cancer. The popular journal - Indian Medical Association, in its article published in Nov 2011, mentioned that doctors from a hospital in Mumbai revealed that a new type of Cancer has hit Indian women and they named the disease - Sari Cancer.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more