ರೆಡ್ಡಿಗೆ ಇವತ್ತು ಬೇಲ್ ಸಿಕ್ರೆ ನಿಜಕ್ಕೂ ಪವಾಡ ಕಂಡ್ರಿ!

Janardhana Reddy
ಹೈದರಾಬಾದ್, ಜ.30: ಓಬಳಾಪುರಂ ಗಣಿ ಕಂಪನಿಯ ನಿರ್ದೇಶಕರಾದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಸೇರಿದಂತೆ ನಾಲ್ವರು ಆರೋಪಿಗಳ ಹಣೆಬರಹವನ್ನು ನಾಂಪಲ್ಲಿ ಸಿಬಿಐ ಕೋರ್ಟ್ ಸೋಮವಾರ(ಜ.30) ನಿರ್ಧರಿಸಲಿದೆ.

ಸಿಬಿಐ ಚಾರ್ಜ್ ಶೀಟ್ ಸಲ್ಲಿಸಿದ ಮೇಲೆ ಗಾಲಿ ರೆಡ್ಡಿಗೆ ನಿದ್ದೆ ಬಂದಿಲ್ಲ. ಕಾರಣ, ಐಎಎಸ್ ಅಧಿಕಾರಿ ಶ್ರೀಲಕ್ಷ್ಮಿ ಅವರ ಹೆಸರನ್ನು ದೋಷಾರೋಪಣ ಪಟ್ಟಿಯಿಂದ ಕೈ ಬಿಡಲಾಗಿದೆ. ಜೊತೆಗೆ ಬಳ್ಳಾರಿ ಹಾಗೂ ಬೆಂಗಳೂರಿನ ರೆಡ್ಡಿ ನಿವಾಸಗಳ ಮೇಲೆ ಮತ್ತೆ ಸಿಬಿಐ ದಾಳಿ ಆರಂಭಿಸಿದೆ.

ಗಾಲಿ ರೆಡ್ಡಿ ಆಪ್ತ ಅಲಿ ಖಾನೆ ಮೇಲೆ ಲುಕ್ ಔಟ್ ನೋಟಿಸ್ ನೀಡಲಾಗಿದ್ದು, ಈ ಸಂದರ್ಭದಲ್ಲಿ ಜನಾರ್ದನ ರೆಡ್ಡಿ ಸೇರಿದಂತೆ ಪ್ರಮುಖ ಆರೋಪಿಗಳಿಗೆ ಜಾಮೀನು ನೀಡುವುದು ಪ್ರಕರಣದ ತನಿಖೆಗೆ ಭಾರಿ ಹಿನ್ನೆಡೆಯಾಗಲಿದೆ ಎಂದು ಸಿಬಿಐ ವಾದಿಸಲಿದೆ.

ಇತ್ತ ಲಕ್ಷ್ಮಿ ಫೆ.21ಕ್ಕೆ ಜಾಮೀನು ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಈ ಮಧ್ಯೆ ಜನಾರ್ದನ ರೆಡ್ಡಿ ಜಾಮೀನು ಅರ್ಜಿ ಪ್ರಕರಣದ ತೀರ್ಪನ್ನು ನ್ಯಾ.ನಾಗಮೂರ್ತಿ ಶರ್ಮ ಅವರು ಪ್ರಕಟಿಸಲಿದ್ದು, ಎಲ್ಲರ ಚಿತ್ತ ಕೋರ್ಟಿನತ್ತ ನೆಟ್ಟಿದೆ.

ಹೆಚ್ಚಿನ ವಿಚಾರಣೆ ಅಗತ್ಯತೆ ಇರುವುದರಿಂದ ಆರೋಪಿಗಳಿಗೆ ಜಾಮೀನು ನೀಡಲು ಕೋರ್ಟ್ ನಿರಾಕರಿಸುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+