35 ವೀರಶೈವ ಶಾಸಕರು ಎನ್ ಸಿಪಿಗೆ: ಬಿಸಿ ಪಾಟೀಲ್
ರಾಯಚೂರು,
ಜ.30: ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳಲ್ಲಿ ವೀರಶೈವ ಲಿಂಗಾಯಿತರನ್ನು ಕಡೆಗಣಿಸಲಾಗುತ್ತಿದೆ. ಸುಮಾರು 35 ಶಾಸಕರು ಎನ್‌ಸಿಪಿಗೆ ಸೇರುವ ನಿರೀಕ್ಷೆ ಇದೆ ಎಂದು ಶಾಸಕ ಬಿ.ಸಿ. ಪಾಟೀಲ್ ಹೇಳಿದ್ದಾರೆ. id="toptextpromo">ಜಾತ್ಯತೀತ
ನಿಲುವಿನಲ್ಲಿ ವೀರಶೈವ ಲಿಂಗಾಯಿತಯರನ್ನು ಕಾಂಗ್ರೆಸ್ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಬಹುಸಂಖ್ಯಾತ ವೀರಶೈವ ವರ್ಗಕ್ಕೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡದೆ ಕಡೆಗಾಣಿಸಲಾಗಿದೆ ಎಂದು ಬಿಸಿ ಪಾಟೀಲ್ ಹೇಳಿದರು. id='are-slot-1' class='oiad oi-axt oiadv'> id='top-searched-articles'>ಹೈಕಮಾಂಡ್
ಅನುಮತಿ ಇಲ್ಲದೆ ಇಲ್ಲಿ ಏನೂ ನಡೆಯದು, ಕಾಂಗ್ರೆಸ್ ಸಂಸ್ಕೃತಿ ಪಕ್ಷದ ಏಳಿಗೆಗೆ ಮಾರಕವಾಗಿದೆ. ಕಾಂಗ್ರೆಸ್‌ನ 35 ಸಮಾನ ಮನಸ್ಕ ಶಾಸಕರು ಪರ್ಯಾಯ ಪಕ್ಷ ಕಟ್ಟುವ ಬಗ್ಗೆ ಚಿಂತನೆ ನಡೆಸಿದ್ದೇವೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಲ್ಲಿರುವ ವೀರಶೈವ ಬಂಧುಗಳು ಕೂಡಾ ತಮ್ಮ ಪಕ್ಷಕ್ಕೆ ಸೇರುತ್ತಾರೆ ಎಂಬ ನಿರೀಕ್ಷೆಯಿದೆ ಎಂದು ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.











Click it and Unblock the Notifications