ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತ್ಯಾಚಾರ ಬಾಧಿತರಿಗೆ ಸರಕಾರಿ ನೌಕರಿ: ಮುಲಾಯಂ

By Srinath
|
Google Oneindia Kannada News

up-polls-mulayam-promises-govt-jobs-to-rape-victims
ಸಿದ್ಧಾರ್ಥನಗರ (ಉತ್ತರಪ್ರದೇಶ),ಜ.17: ಚುನಾವಣೆ ಕಾಲೇ... ಜನನಾಯಕರು ನಾನಾ ವೇಶ, ಭಾಷೆಗಳನ್ನು ತೊಡುತ್ತಿದ್ದಾರೆ. ಅಂದಕಾಲತ್ತಿಲ್ ಮಾಯಾವತಿ ಆಡಳಿತದಲ್ಲಿ ಉತ್ತರ ಪ್ರದೇಶ 'ಅತ್ಯಾಚಾರದ ತವರೂರು' ಎನಿಸಿತ್ತು. ಆ ಪಾಪವನ್ನು ತೊಡೆದು ಹಾಕಲು ಸಮಾಜವಾದಿ ಪಕ್ಷ ಪಣತೊಟ್ಟಿದೆ.

ಏನಪಾ ಅಂದರೆ ಅತ್ಯಾಚಾರಕ್ಕೊಳಗಾದ ಮಹಿಳೆಯರಿಗೆ ಸರಕಾರಿ ನೌಕರಿ ಕೊಡುವುದಾಗಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಘೋಷಿಸಿದ್ದಾರೆ. ಆದರೆ ಕಂಡೀಷನ್ ಅಪ್ಲೈ ಅನ್ನುವಂತೆ ಸಮಾಜವಾದಿ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಮಾತ್ರ ಆ ಛಾನ್ಸು ಎನ್ನುತ್ತಿದೆ ಎಸ್ ಪಿ!

'ಅತ್ಯಾಚಾರದ ತವರೂರು' ಉತ್ತರ ಪ್ರದೇಶದಲ್ಲಿ ರೇಪ್ ಪ್ರಕರಣಗಳು ಮಿತಿಮೀರಿವೆ. ಈ ಹಾವಳಿಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲಾಗುವುದು. ಬಾಧಿತ ಮಹಿಳೆಗೆ ಅಥವಾ ಆಕೆಯ ಕುಟುಂಬದಲ್ಲಿ ಒಬ್ಬರಿಗೆ ಸರಕಾರಿ ನೌಕರಿ ನೀಡುವುದಾಗಿ ಮುಲಾಯಂ ಚುನಾವಣೆ ಪ್ರಚಾರ ಸಭೆಯಲ್ಲಿ ಪ್ರಕಟಿಸಿದ್ದಾರೆ.

ಮುಂಬರುವ ವಿಧಾನಸಭೆ ಚುನಾವಣೆಗಳಲ್ಲಿ ಗೆಲುವಿನ ಕನಸು ಕಾಣುತ್ತಿರುವ ಮುಲಾಯಂ ಅವರು ಅತ್ಯಾಚಾರಿಗಳಿಗೆ ಕಠಿಣಾತಿಕಠಿಣ ಶಿಕ್ಷೆ ವಿಧಿಸುವುದಾಗಿ ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲ. ಪ್ರತಿ ವರ್ಷ ಬಡ ಮಹಿಳೆಯರಿಗೆ ವರ್ಷಕ್ಕೆ ಎರಡು ಸೀರೆ ವಿತರಿಸುವುದಾಗಿಯೂ ಅವರು ಪ್ರಕಟಿಸಿದ್ದಾರೆ. ಆದರೆ ಇದೆಲ್ಲ ಕೈಗೂಡಬೇಕೆಂದರೆ ಪಕ್ಷವನ್ನು ಅಧಿಕಾರಕ್ಕೆ ತನ್ನಿ ಎಂದು ಮತದಾರರನ್ನು ಅವರು ಓಲೈಸುತ್ತಿದ್ದಾರೆ.

English summary
Samajwadi Party chief Mulayam Singh Yadav announced that rape victims would be given government jobs if his party was voted to power in Uttar Pradesh. Yadav also promised two sarees every year to a poor woman
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X