ಡಿವಿಜಿ ರಸ್ತೆಗೆ ನುಗ್ಗಲಿವೆ BMTC ಬಸ್ಸುಗಳು

(BMTC ಬಸ್ಸಿಗೆ ಸಿಕ್ಕಿ Avenue Road ಪಡ್ಚ: ಇಲ್ಲಿ ಕ್ಲಿಕ್ ಮಾಡಿ)
ಅಲ್ಲಿ ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರು ಸೌತ್ ಕಮರ್ಷಿಯಲ್ ಸ್ಟ್ರೀಟ್ ಆಗಿ ರೂಪಾಂತರವಾಗಿರುವ ಡಿವಿಜಿ ರಸ್ತೆಯಲ್ಲಿ ಬಸ್ ಬಿಡಲು ಟ್ರಾಫಿಕ್ ಪೊಲೀಸರು ಮಂತ್ರಾಲೋಚಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. 'ಅವೆನ್ಯೂ ರೋಡಿಗೆ ಹೋಲಿಸಿದಲ್ಲಿ ಡಿವಿಜಿ ರೋಡ್ ಅತ್ಯಂತ ಸುವಿಶಾಲವಾಗಿದೆ. ಅಲ್ಲಿ ಬಸ್ ಓಡಾಡಲು ಅಡ್ಡಿಯೇನು ಇಲ್ಲ.
ಅತ್ತ ಬಸವನಗುಡಿ ಪೊಲೀಸ್ ಠಾಣೆ ಎದುರು ಠಾಗೋರ್ ಸರ್ಕಲ್ ಅಂಡರ್ ಪಾಸ್ ಕಾಮಗಾರಿ ಇನ್ನು ಯಾವ ಕಾಲಕ್ಕೆ ಮುಗಿಯುತ್ತೋ ಅಲ್ಲಿವರೆಗೂ ಪ್ರಯೋಗಾರ್ಥವಾಗಿ ಡಿವಿಜಿ ನಡು ರೋಡಿನಲ್ಲೇ ಬಸ್ ಓಡಿಸಿ' ಎಂದು ಟ್ರಾಫಿಕ್ ಪೊಲೀಸ್ ಆಯುಕ್ತ ಡಾ. ಸಲೀಂ ಅವರು ಬಿಎಂಟಿಸಿಗೆ ಸದ್ಯದಲ್ಲೇ ಒಲವಿನ ಓಲೆ ಕಳಿಸುವ ಲಕ್ಷಣಗಳು ಹೆಚ್ಚಾಗಿವೆ.











Click it and Unblock the Notifications