ತಿಹಾರ್ ಜೈಲಿನಲ್ಲಿ ನಡೆದಿದೆ ಕ್ಯಾಂಪಸ್ ಇಂಟರ್ ವ್ಯೂ!

ಜೈಲು ಶಿಕ್ಷೆ ಅನುಭವಿಸಿದವರಿಗೆ ಉದ್ಯೋಗ ನೀಡಲು ಎಲ್ಲರೂ ಹಿಂದುಮುಂದು ನೋಡುತ್ತಾರೆ. ಖಾಸಗಿ ಸಂಸ್ಥೆಗಳಲ್ಲಾದರೂ ಕೆಲಸ ಗಿಟ್ಟಿಸಬಹುದು ಆದರೆ ಜೈಲಿಗೆ ಹೋಗಿಬಂದವರು ಸರಕಾರಿ ಉದ್ಯೋಗಕ್ಕೆ ಅನರ್ಹರು. ಅಂತಹುದರಲ್ಲಿ ಈಗ ಹತ್ತಾರು ಕಂಪನಿಗಳು ಅದೂ ರಾಜಧಾನಿ ದೆಹಲಿಯ ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸಿದವರನ್ನು ಕೆಲಸಕ್ಕೆ ತೆಗೆದುಕೊಳ್ಳಲು ದೊಡ್ಡ ಮನಸು ಮಾಡಿವೆ. ಇದು ನಿಜಕ್ಕೂ ಸ್ವಾಗತಾರ್ಹ.
'ನೂರಾರು ಕೈದಿಗಳು ಈ ಕಂಪನಿಗಳಲ್ಲಿ ಉದ್ಯೋಗ ಮಾಡಲು ಅರ್ಹರಾಗಿದ್ದಾರೆ. ಅಂತಹವರ ಬೇಟೆಗೆ ಕಂಪನಿಗಳು ಮುಂದಾಗಿರುವುದು ಸಂತಸ ತಂದಿದೆ. ಜೈಲು ಕೈದಿಗಳ ಸುಧಾರಣೆಗೆ ಇದರಿಂದ ನಿಜವಾದ ಅರ್ಥ ಬರುತ್ತದೆ' ಎಂದು ತಿಹಾರ್ ಜೈಲಿನ ವಕ್ತಾರ ಸುನೀಲ್ ಗುಪ್ತಾ ಹೇಳಿದ್ದಾರೆ. ಅಂದಹಾಗೆ ಮೊದಲ ಬಾರಿಗೆ ಕಳೆದ ವರ್ಷ ಅಲ್ಪ ಪ್ರಮಾಣದಲ್ಲಿ ಇಂತಹ ಪ್ರಯೋಗ ನಡೆದಿತ್ತು.
ತಕ್ಷಣಕ್ಕೆ ಜೈಲಿನಿಂದ ಬಿಡುಗಡೆಯಾಗಲಿರುವವರು ಮತ್ತು ಜೀವಾವಧಿ ಶಿಕ್ಷೆಗೆ ಒಳಗಾಗಿ ಬಿಡುಗಡೆಗೆ ಅರ್ಹತೆ ಪಡೆದಿರುವವರನ್ನು ಸಂದರ್ಶನಕ್ಕೆ ಪರಿಗಣಿಸಲಾಗುವುದು. ಸಾಮಾನ್ಯವಾಗಿ ಮಾಸಿಕ 10,000 ರು. ನಿಂದ 50,000 ರು. ವರೆಗಿನ ಉದ್ಯೋಗಗಳು ಇವರಿಗಾಗಿ ಕಾಯುತ್ತಿವೆ.












Click it and Unblock the Notifications