ಸಿಬಿಐನ ವಿವಿ ಲಕ್ಷ್ಮಿನಾರಾಯಣ ರಾಜಕೀಯ ಪ್ರವೇಶ?

CBI VV Lakshminarayana
ಹೈದರಾಬಾದ್, ಜ.27: ಅಕ್ರಮ ಗಣಿಗಾರಿಕೆ ತನಿಖೆಯಲ್ಲಿ ತೊಡಗಿರುವ ಸಿಬಿಐನ ಖಡಕ್ ಅಧಿಕಾರಿ ಜಂಟಿ ನಿರ್ದೇಶಕ ವಿವಿ ಲಕ್ಷ್ಮಿ ನಾರಾಯಣ ಅವರು ರಾಜಕೀಯ ಪ್ರವೇಶಕ್ಕೆ ಸಿದ್ಧತೆ ನಡೆಯುತ್ತಿದೆಯೇ? ಕಾಂಗ್ರೆಸ್ ಹಾಗೂ ತೆಲುಗು ದೇಶಂ ಪಾರ್ಟಿ ಅವರಿಗೆ ಸಚಿವ ಸಂಪುಟ ಸ್ಥಾನದ ಆಫರ್ ನೀಡಿದಿಯೇ? ಸ್ಪಷ್ಟ ಮಾಹಿತಿ ಇಲ್ಲದಿದ್ದರೂ ಹೀಗೊಂದು ಗಾಳಿ ಸುದ್ದಿಯನ್ನು ವೈಎಸ್ ಆರ್ ಕಾಂಗ್ರೆಸ್ ಪಕ್ಷ ಹಬ್ಬಿಸುತ್ತಿದೆ.

ವೈಎಸ್ ಜಗನ್ ಮೋಹನ್ ರೆಡ್ಡಿ ಹಾಗೂ ಅವರ ಕುಟುಂಬದ ಅಕ್ರಮಗಳ ವಿರುದ್ಧ ಯುದ್ಧ ಸಾರಿರುವ ಲಕ್ಷ್ಮಿನಾರಾಯಣ ಅವರಿಗೆ ರಾಜಕೀಯ ಅಂದ್ರೆ ತುಂಬಾ ಇಷ್ಟ. ಕಾಂಗ್ರೆಸ್ ಅಥವಾ ಟಿಡಿಪಿ ಜೊತೆ ಕೈ ಜೋಡಿಸಿ ವೈಎಸ್ ಆರ್ ಕುಟುಂಬದ ಪತನಕ್ಕಾಗಿ ಕಾದಿದ್ದಾರೆ ಎಂದು ವೈಎಸ್ ಆರ್ ಕಾಂಗ್ರೆಸ್ ವಕ್ತಾರ ಗಟ್ಟು ರಾಮಚಂದ್ರ ರಾವ್ ಅವರು ಆರೋಪಿಸಿದ್ದಾರೆ.

ವೈಎಸ್ ಆರ್ ಕಾಂಗ್ರೆಸ್ ವಕ್ತಾರರು ಹೇಳುವ ಲಾಜಿಕ್ ತುಂಬಾ ಚೆನ್ನಾಗಿದೆ. ಈ ಹಿಂದೆ ಸಿಬಿಐ ನಿರ್ದೇಶಕರಾಗಿದ್ದ ಕೆ ವಿಜಯರಾಮರಾವ್ ಅವರು ಅಂದಿನ ಟಿಡಿಪಿ ಸರ್ಕಾರದಲ್ಲಿ ಸ್ಥಾನ ಪಡೆದಿದ್ದರು, ವಿಜಯರಾಮರಾವ್ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ಸೆಟೆದು ನಿಂತಿದ್ದನ್ನು ಸ್ಮರಿಸಬಹುದು.

ಇದೇ ರೀತಿ ಲಕ್ಷ್ಮಿನಾರಾಯಣ ಅವರು ಜಗನ್ ರನ್ನು ಕಾಡುತ್ತಿದ್ದಾರೆ. ಮಾಧ್ಯಮಗಳಲ್ಲೂ ಇವರನ್ನು ಹೀರೋ ಎಂದು ಬಣ್ಣಿಸಲಾಗುತ್ತಿದೆ ಎಂದು ವೈಎಸ್ ಆರ್ ಕಾಂಗ್ರೆಸ್ ವಕ್ತಾರ ಬಾಜಿರೆಡ್ಡಿ ಗೋವರ್ಧನ್ ಹೇಳಿದ್ದಾರೆ. [ವಿವಿ ಲಕ್ಷ್ಮಿ ನಾರಾಯಣ ಅವರ ಪೂರ್ಣ ಪರಿಚಯ]

ಲಕ್ಷ್ಮಿನಾರಾಯಣ್ ಹೊರ ಪ್ರಪಂಚಕ್ಕೆ ಕಾಣುವಂತೆ ಮುಗ್ಧರಲ್ಲ. ಕಾಂಗ್ರೆಸ್ ಪಕ್ಷ ಹಾಗೂ ಟಿಡಿಪಿ ಅಧ್ಯಕ್ಷ ಎನ್ ಚಂದ್ರಬಾಬು ನಾಯ್ಡು ಸಹಕಾರದಿಂದ ಮೆರೆಯುತ್ತಿದ್ದಾರೆ. ಅಸಲಿ ಕಳ್ಳರನ್ನು ಸುಮ್ಮನೆ ಬಿಟ್ಟಿದ್ದಾರೆ ಎಂದು ಬಾಜಿರೆಡ್ಡಿ ಗುಡುಗಿದ್ದಾರೆ. ವೈಎಸ್ ಆರ್ ಕಾಂಗ್ರೆಸ್ ವಕ್ತಾರರ ಆಧಾರರಹಿತ ಆರೋಪಗಳನ್ನು ಲಕ್ಷ್ಮಿನಾರಾಯಣ ಅವರು ನಿರೀಕ್ಷೆಯಂತೆ ನಗುಮೊಗದಿಂದ ನಿರಾಕರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+