ಮುಡುಕುತೊರೆ ಜಾತ್ರೆಗೆ ಎಲ್ಲರೂ ತಪ್ಪದೇ ಬನ್ರಪ್ಪಾ

ಆದರೆ ಕೆಲವು ಕ್ಯಾಲೆಂಡರ್‌ಗಳಲ್ಲಿ ತಪ್ಪಾಗಿ 01.02.2012ರಂದು ರಥೋತ್ಸವ ಎಂದು ತಪ್ಪಾಗಿ ನಮೂದಾಗಿದ್ದು, ಭಕ್ತಾಧಿಗಳಿಗೆ ನಿಖರವಾದ ಮಾಹಿತಿ ದೊರೆಯುತ್ತಿಲ್ಲ. ಈ ಬಗ್ಗೆ ದಿನಾಂಕ 09.01.2012ರಂದು ತಿ. ನರಸೀಪುರ ವಿಧಾನಸಭಾ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ಹಾಗೂ ಮಾನ್ಯ ಉಪವಿಭಾಗಾಧಿಕಾರಿಯವರ ಸಮ್ಮುಖದಲ್ಲಿ ಜರುಗಿದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಅದರಂತೆ ಮುಡುಕುತೊರೆ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದ ಜಾತ್ರೆಯು ದಿನಾಂಕ 27.01.2012 ರಿಂದ ಪ್ರಾರಂಭವಾಗಿ ದಿನಾಂಕ 12.02.2012ರವರೆಗೆ ಜರುಗಲಿದೆ.
ದಿನಾಂಕ 03.02.2012ರಂದು ರಥೋತ್ಸವ, ದಿನಾಂಕ 06.02.2012ರಂದು ತೆಪ್ಪೋತ್ಸವವು ಜರುಗಲಿದೆ. ಅಲ್ಲದೆ ಜತ್ರೆಗೆ ದನಕರುಗಳನ್ನು ಕರೆತರುವವರು ದಿನಾಂಕ28.01.2012ರ ನಂತರ ಕರೆತರುವಂತೆಯೂ ಅದಕ್ಕೆ ಮುಂಚಿತವಾಗಿ ಕರೆತರಬಾರದೆಂದು ಕಾರ್ಯನಿರ್ವಾಹಕ ಅಧಿಕಾರಿಗಳು, ಶ್ರೀ ವೈದ್ಯನಾಥೇಶ್ವರ ಮತ್ತು ಸಮೂಹ ದೇವಸ್ಥಾನಗಳು, ತಲಕಾಡು, ತಿ. ನರಸೀಪುರ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಡುಕುತೊರೆ ಎಲ್ಲಿದೆ?: ಈ ಕ್ಷೇತ್ರವು ಮೈಸೂರು ಜಿಲ್ಲೆಯ ತಾಲೂಕು ಕೇಂದ್ರಗಳಲ್ಲೊಂದಾದ ತಿ.ನರಸೀಪುರದಿಂದ 19 ಕಿ.ಮೀ ದೂರದಲ್ಲಿದೆ. ಕಾವೇರಿ ನದಿ ಪಶ್ಚಿಮದಿಂದ ಉತ್ತರ ದಿಕ್ಕಿನತ್ತ ಹರಿದು, ಪೂರ್ವಕ್ಕೆ ಮುರಿದು ದಕ್ಷಿಣಕ್ಕೆ ಪ್ರವೇಶಿಸಿದ್ದರಿಂದ ಬಹುಶಃ ಮುಡುಕುತೊರೆ ಎಂಬ ಹೆಸರು ಬಂದಿರಬಹುದೆಂದು ಹೇಳಲಾಗುತ್ತಿದೆ.
ಇನ್ನು ಇಲ್ಲಿನ ಸೋಮಗಿರಿ ಬೆಟ್ಟದ ಮೇಲಿನ ಐತಿಹಾಸಿಕ ಮಲ್ಲಿಕಾರ್ಜುನ ದೇಗುಲದ ಆದಿದೈವ ಮಲ್ಲಿಕಾರ್ಜುನ ಲಿಂಗವೂ ಕೂಡ ತಲಕಾಡು ಪಂಚಲಿಂಗದೊಂದಿಗೆ ಸೇರಿರುವುದು ಇಲ್ಲಿನ ಮತ್ತೊಂದು ವಿಶೇಷತೆ. ಮುಡುಕುತೊರೆ ಬಗ್ಗೆ ಹೆಚ್ಚಿನ ವಿವರಗಳಿಗೆ ಕ್ಲಿಕ್ ಮಾಡಿ












Click it and Unblock the Notifications