ಆಂಟ್ರಿಕ್ಸ್ ಡೀಲ್: ಇಸ್ರೋ ಮಾಧವನ್ ನಾಯರ್ ಮೇಲೆ ನಿಷೇಧ
ಬೆಂಗಳೂರು,
ಜ.25: ಕಳೆದ ಫೆಬ್ರವರಿಯಲ್ಲಿ ಬೆಳಕಿಗೆ ಬಂದಿದ್ದ 2,00,000 ಕೋಟಿ ರು. ಹಗರಣದ ಹಿನ್ನೆಲೆಯಲ್ಲಿ ಇಸ್ರೋದ ಮಾಜಿ ಅಧ್ಯಕ್ಷ ಜಿ. ಮಾಧವನ್ ನಾಯರ್ ಮೇಲೆ ಕೇಂದ್ರ ಸರಕಾರ ಇದೀಗ ನಿಷೇಧ ಹೇರಿದೆ. ಹಗರಣ ನಡೆದಾಗ ಮಾಧವನ್ ನಾಯರ್ ಇಸ್ರೋದ ಮುಖ್ಯಸ್ಥರಾಗಿದ್ದರು. id="toptextpromo">ಈ
ಹಿನ್ನೆಲೆಯಲ್ಲಿ ದೇಶದಲ್ಲಿ ಯಾವುದೇ ಸರಕಾರಿ ನೌಕರಿಗೆ ಅವರನ್ನು ಸೇರಿಸಿಕೊಳ್ಳುವಂತಿಲ್ಲ ಎಂದು ಕೇಂದ್ರ ಸರಕಾರ ಸಾರಿದೆ. ಹಗರಣದ ಬಗ್ಗೆ ತನಿಖೆ ಕೈಗೊಂಡಿದ್ದ ಕೇಂದ್ರದ ಉನ್ನತ ಮಟ್ಟದ ಸಮಿತಿ (HPC) ಈ ಶಿಫಾರಸ್ಸು ಮಾಡಿತ್ತು. ಹಗರಣ ಬೆಳಕಿಗೆ ಬಂದ ದಿನವೇ (ಕಳೆದ ವರ್ಷ ಫೆಬ್ರವರಿ 7) ದಟ್ಸ್ ಕನ್ನಡ ಸವಿಸ್ತಾರ ವರದಿ ಪ್ರಕಟಿಸಿತ್ತು. id='are-slot-1' class='oiad oi-axt oiadv'> id='top-searched-articles'>ನಾಯರ್
ಜತೆಗೆ ಕೆ. ಭಾಸ್ಕರ ನಾರಾಯಣ (ಇಸ್ರೋದ ಮಾಜಿ ವೈಜ್ಞಾನಿಕ ಕಾರ್ಯದರ್ಶಿ), ಕೆಆರ್ ಶ್ರೀಧರಮೂರ್ತಿ (ಆಂಟ್ರಿಕ್ಸ್ ಸಂಸ್ಥೆಯ ಮಾಜಿ ಎಂಡಿ) ಮತ್ತು ಕೆಎನ್ ಶಂಕರ್ (ಇಸ್ರೋದ ಮಾಜಿ ನಿರ್ದೇಶಕ) ಅವರಿಗೂ ಇದೇ ಗತಿ ಕಾಣಿಸಲಾಗಿದೆ ಎಂದು ಇಸ್ರೋದ ಅಧಿಕೃತ ಮೂಲಗಳು ತಿಳಿಸಿವೆ. ಅಂದಹಾಗೆ, ಮಾಧವನ್ ನಾಯರ್ ಭಾರತದ ಯಶಸ್ವೀ Chandrayan I ಯೋಜನೆಯ ರೂವಾರಿ.











Click it and Unblock the Notifications