Get Updates
Get notified of breaking news, exclusive insights, and must-see stories!

ಮಾರ್ಕೆಟ್ ಧ್ವಂಸ; ಪುರಾತನ ಮರಗಳನ್ನೂ ಕಡಿದು ಹಾಕಿ

gandhi-bazaar-markets-razed-traffic-police-version
ಬೆಂಗಳೂರು, ಜ.24: ಬಸವನಗುಡಿಯ ಪುರಾತನ ಲ್ಯಾಂಡ್ ಮಾರ್ಕ್ ಗಳಲ್ಲಿ ಒಂದಾಗಿದ್ದ ಗಾಂಧಿಬಜಾರ್ ಮಾರುಕಟ್ಟೆಗಳೆಲ್ಲ ಇಂದು ಧ್ವಂಸವಾಗಿವೆ. ಮಾರುಕಟ್ಟೆಯ ಅಂಗಡಿಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಟ್ರಾಫಿಕ್ ಪೊಲೀಸರು ಏನನ್ನುತ್ತಾರೆ?

ಪೊಲೀಸರ 'ಮಾಮೂಲು' ವಿಷ್ಯಾ ಏನೇ ಇರಬಹುದು. ಆದರೆ ನಿಜಕ್ಕೂ ಅವರೂ ನಿಟ್ಟುಸಿರುಬಿಟ್ಟಿದ್ದಾರೆ. 'ಯಾವಾಗ್ಲೋ ಈ ಕೆಲಸ ಆಗಬೇಕಿತ್ತು. ತುಂಬಾ ರಫ್ಫು ಇಲ್ಲಿನ ಅಂಗಡಿಗವರು. ನಮಗೂ ಸಾಕಾಗಿ ಹೋಗಿತ್ತು. ಏನ್ಮಾಡೋಣ, ಸದ್ಯ ಈಗ್ಲಾದರೂ ನೆಲಸಮವಾಯಿತಲ್ಲಾ. ಪಾಲಿಕೆಯವರು ಸರಿಯಾದ ಕೆಲಸವನ್ನೇ ಮಾಡಿದ್ದಾರೆ' ಎನ್ನುತ್ತಾರೆ ಬಸವನಗುಡಿ ಟ್ರಾಫಿಕ್ ಪೊಲೀಸ್ ಅಧಿಕಾರಿಯೊಬ್ಬರು. ಅವರ ಮಾತುಗಳಲ್ಲೇ ಕೇಳಿ:

ಮುಂದೆ ಏನ್ಮಾಡಬೇಕು ಅಂದರೆ ಈ ಅಂಗಡಿಗಳನ್ನು ನೆಲಸಮ ಮಾಡಿದಂತೆ ಅವುಗಳಿಗೆ ಆಸರೆಯಾಗಿರುವ ನಾಲ್ಕಾರು ಬೃಹತ್ ಮರಗಳನ್ನೂ ಕಡಿದು ಹಾಕಬೇಕು. ಇವು ಟ್ರಾಫಿಕ್ ಗೆ ಅಡ್ಡಲಾಗಿ ಅಂಗಡಿಗಳಿಗೆ ಆಸರೆಯಾಗಿ ಬೇರುಬಿಟ್ಟಿವೆ. ನೂರಾರು ವರ್ಷಗಳ ಈ ಮರಗಳನ್ನು ಕಡಿದುಹಾಕಿದರೆ ಅರ್ಧ ಕೆಲಸ ಸಲೀಸಾದೀತು.

ಟ್ರಾಫಿಕ್ ಸಂಚಾರಕ್ಕೆ ಮತ್ತಷ್ಟು ಜಾಗ ಸಿಗುತ್ತದೆ. ಯಾವಾಗ ಟ್ರಾಫಿಕ್ ಜಾಸ್ತಿ ಆಗುತ್ತೋ ಆಗ ಅಂಗಡಿಗಳವರು ರೋಡಿಗೆ ಬರುವುದಕ್ಕೆ ಹಿಂಜರಿಯುತ್ತಾರೆ. ಅಂಗಡಿಗಳವರು ಆ ಮರಗಳಿಗೆ ಮೊಳೆ ಹೊಡೆದು ತಮ್ಮ ಹಕ್ಕು ಸ್ಥಾಪಿಸುವುದೂ ತಪ್ಪುತ್ತದೆ.

ಹೌದು, ನಮ್ಮ ಪೊಲೀಸ್ ಸಾಹೇಬರು ಹೇಳಿದ್ದೂ ಸರಿ ಅನ್ನಿಸುತ್ತಿದೆ. ಮೊದಲು ಆ ಕಾರ್ಯವಾಗಲಿ. ಆದರೆ ಈ ಪರಿಸರವಾದಿಗಳು ರಗಳೆ ತೆಗೆಯದಿರಲಿ ಎಂದು ಆಶಿಸೋಣ. ಸುವಿಶಾಲ ರಸ್ತೆಗಳನ್ನು ಕಾಣೋಣ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+