ಗಾಂಧಿಬಜಾರ್ ಹೂ-ಹಣ್ಣು-ತರಕಾರಿ ಮಾರುಕಟ್ಟೆ ಧ್ವಂಸ
ಬೆಂಗಳೂರು, ಜ.24: ಬಸವನಗುಡಿಯ ಜನ ಮಂಗಳವಾರ ಬೆಳ್ಳಂಬೆಳಗ್ಗೆ ಗಾಂಧಿಬಜಾರ್ ಮಾರುಕಟ್ಟೆಯಲ್ಲಿ ಕಂಡುಬಂದ ದೃಶ್ಯಾವಳಿಯನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ. ಆದರೆ ತಕ್ಷಣ ಸಮಾಧಾನದ ನಿಟ್ಟುಸಿರನ್ನೂ ಬಿಟ್ಟಿದ್ದಾರೆ.
ಏನಪಾ ಅಂದೆರೆ ಅನಾದಿ ಕಾಲದಿಂದಲೂ ಇಲ್ಲಿ ಠಿಕಾಣಿ ಹೂಡಿದ್ದ ಸಾಲು ಸಾಲು ಹೂವು, ತರಕಾರಿ ಅಂಗಡಿಗಳನ್ನು ಬಿಬಿಎಂಪಿ ಅಧಿಕಾರಿಗಳು ಅತ್ಯಂತ ವ್ಯವಸ್ಥಿತವಾಗಿ ಧ್ವಂಸಗೊಳಿಸಿದ್ದಾರೆ. ಜೆಸಿಬಿ ಯಂತ್ರಗಳೊಂದಿಗೆ ಅಧಿಕೃತವಾಗಿ ಗಾಂಧಿಬಜಾರ್ ಮುಖ್ಯ ರಸ್ತೆಗೆ ಸೋಮವಾರ ರಾತ್ರಿ11 ಗಂಟೆಗೆ ಅಡಿಯಿಟ್ಟ ಅಧಿಕಾರಿಗಳು ಅಷ್ಟೂ ಅಂಗಡಿಮುಂಗಟ್ಟುಗಳನ್ನು ಸಪಾಟುಗೊಳಿಸಿದ್ದಾರೆ.
ಗಾಂಧಿಬಜಾರ್ ಹೂ ಮಾರುಕಟ್ಟೆಗಳ ಧ್ವಂಸ'ದ ಸಮಗ್ರ ಚಿತ್ರಣಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ. (Pics by Sadhu)
ತಮ್ಮ ಆಜನ್ಮ ಸಿದ್ಧ ಹಕ್ಕು ಎಂಬಂತೆ ಇಲ್ಲಿ ಅಂಗಡಿಗಳನ್ನು ಇಟ್ಟುಕೊಂಡಿದ್ದ ಅಂಗಡಿಗಳವರು 'ಜೆಸಿಬಿ ಕಾರ್ಯಾಚರಣೆಗೆ' ತೀವ್ರ ಪ್ರತಿರೋಧ ಒಡ್ಡಬಹುದು ಎಂದು ಎಣಿಸಿದ್ದ ಬಿಬಿಎಂಪಿ ಭಾರಿ ಪೊಲೀಸ್ ಬಂದೋಬಸ್ತ್ ನೊಂದಿಗೆ ಕಾರ್ಯಾಚರಣೆಯನ್ನು ಅತ್ಯಂತ ಕರಾರುವಕ್ಕಾಗಿ ಮಾಡಿ ಮುಗಿಸಿದೆ.
ದಟ್ಸ್ ಕನ್ನಡ ತನ್ನ ಓದುಗರಿಗಾಗಿ 'ಗಾಂಧಿಬಜಾರ್ ಹೂ ಮಾರುಕಟ್ಟೆಗಳ ಧ್ವಂಸದ ಸಮಗ್ರ ಚಿತ್ರಣ'ವನ್ನು ಇಂದು ಇಡೀ ದಿನ ಪೋಣಿಸಿಕೊಡಲಿದೆ. ಓದುತ್ತಾ ಬನ್ನಿ













Click it and Unblock the Notifications