ಸೋನಿಯಾ ಆವಾಜ್: ಆಸ್ಟ್ರೇಲಿಯಾದಿಂದ ಸಿದ್ದು ವಾಪಸ್

ಬೆಂಗಳೂರು, ಜ.22: 18 ದಿನಗಳ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಅವರ ಕೆಂಗಣ್ಣಿಗೆ ಗುರಿಯಾಗಿ ತಮ್ಮ ಪ್ರವಾಸವನ್ನು ಮೊಟಕುಗೊಳಿಸಿ ಭಾನುವಾರವೇ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದಾರೆ. ಅಂದಹಾಗೆ, ಸಿದ್ದು 10 ದಿನಗಳ ಹಿಂದೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ಪ್ರವಾಸಕ್ಕೆ ಹೊರಟಿದ್ದರು. ಜ. 29ರಂದು ಅವರು ನಗರಕ್ಕೆ ಹಿಂತಿರುಗುವ ಉದ್ದೇಶ ಹೊಂದಿದ್ದರು.

ಕೆಪಿಸಿಸಿ ಗಾದಿ ಮೇಲೆ ಎಸ್ಎಂ ಕೃಷ್ಣ ಪ್ರತಿಷ್ಠಾಪನೆ: ಅತ್ತ ಕೇಂದ್ರ ಸಚಿವ ಎಸ್ ಎಂ ಕೃಷ್ಣ ವಿರುದ್ಧ ಕೋರ್ಟ್ ವಿಚಾರಣೆಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಕೃಷ್ಣ ಕೈಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಅವರನ್ನು ರಾಜ್ಯ ಕೆಪಿಸಿಸಿ ಅಧ್ಯಕ್ಷ ಗಾದಿ ಮೇಲೆ ಪ್ರತಿಷ್ಠಾಪಿಸುವ ಬಗ್ಗೆಯೂ ಹೈಕಮಂಡ್ ಆಲೋಚಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸಿದ್ದು ಉಪಸ್ಥಿತಿ ಅನಿವಾರ್ಯವಾಗಿದ್ದು, ಪ್ರವಾಸ ಮೊಟಕುಗೊಳಿಸಲು ಅವರಿಗೆ sos ಸಂದೇಶ ರವಾನಿಸಲಾಗಿದೆ ಎನ್ನಲಾಗಿದೆ.

ಮತ್ತೊಂದು ಮೂಲದ ಪ್ರಕಾರ, ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್‌ನ ಕೆಲವರು ಹೈಕಮಾಂಡ್‌ಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಹೈಕಮಾಂಡ್‌ನ‌ ಪ್ರಮುಖರೊಬ್ಬರು ಪ್ರವಾಸ ಮೊಟಕುಗೊಳಿಸುವಂತೆ ಸಿದ್ದರಾಮಯ್ಯಗೆ ಸಲಹೆ ನೀಡಿದ್ದಾರೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ತಮ್ಮ ಪ್ರವಾಸ ಮೊಟಕುಗೊಳಿಸಿದ್ದಾರೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.

ಈ ಮಧ್ಯೆ, ರಾಜ್ಯದಲ್ಲಿ ಕ್ಷಿಪ್ರಗತಿಯ ರಾಜಕೀಯ ವಿದ್ಯಮಾನಗಳು ನಡೆಯುತ್ತಿರುವ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕರಾದವರು ವಿದೇಶದಲ್ಲಿ ಕುಳಿತರೆ ಹೇಗೆ ಎಂದು ಹೈಕಮಾಂಡ್‌ ತಾಕೀತು ಮಾಡಿದ ಹಿನ್ನೆಲೆಯಲ್ಲಿ ಅವರು ಪ್ರವಾಸದಿಂದ ವಾಪಸಾಗುತ್ತಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

ಆಡಳಿತಾರೂಢ ಬಿಜೆಪಿಯಲ್ಲಿ ಆಂತರಿಕ ಬಿಕ್ಕಟ್ಟು ಉಲ್ಬಣಗೊಂಡಿರುವುದು. ಕಾಂಗ್ರೆಸ್‌ನ ಕೆಲವು ಶಾಸಕರು ಎನ್‌ಸಿಪಿಯತ್ತ ದೃಷ್ಟಿ ಹಾಯಿಸಿರುವುದು. ಮತ್ತೂಂದಡೆ ಜೆಡಿಎಸ್‌ ಸಂಘಟನೆಯತ್ತ ಗಮನ ಹರಿಸುತ್ತಿದ್ದರೆ ಪಕ್ಷದ ಕೋಟೆ ಭದ್ರಪಡಿಸುವ ಕಾರ್ಯದಲ್ಲಿ ನಿರತರಾಗಿರಬೇಕಾದ ನಾಯಕರು ಪ್ರವಾಸಕ್ಕೆ ಹೋಗಿರುವ ಬಗ್ಗೆ ಹೈಕಮಾಂಡ್‌ ಅಸಮಾಧಾನಗೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+