ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಲೇಕಣಿಯ ಆಧಾರ ಕಾರ್ಡಿಗೆ ಬಿತ್ತು ಮತ್ತೊಂದು ಗೂಸಾ

By Srinath
|
Google Oneindia Kannada News

nilekani-uid-adhar-card-data-unreliable-home-ministry
ನವದೆಹಲಿ, ಜ.20: ಟೆಕ್ ರಾಜ ನಂದನ್ ನಿಲೇಕಣಿ ನೇತೃತ್ವದ ವಿಶಿಷ್ಟ ಗುರುತು ಸಂಖ್ಯೆ (ಯುಐಡಿ) ಯೋಜನೆಗೆ ಈಗ ಗೃಹ ಸಚಿವಾಲಯವೂ ಕೊಕ್ಕೆ ಹಾಕಿದೆ. ಅಸಲಿಗೆ ಆಧಾರ ಕಾರ್ಡಿನಲ್ಲಿ ದಾಖಲಾಗುವ ವೈಯಕ್ತಿಕ ವಿವರಗಳು ನಂಬಿಕಾರ್ಹವಲ್ಲ ಎಂದು ಯುಐಡಿ ಮೂಲ ಆಶಯಕ್ಕೆ ಪೆಟ್ಟು ಕೊಟ್ಟಿದೆ. ಇದರಿಂದ ಯುಐಡಿ ಯೋಜನೆಯ ಸ್ಥಿತಿ ಅಯೋಮಯವಾಗಿದೆ.

ಯುಐಡಿ ಯೋಜನೆಯ ಅಸಂಬದ್ಧತೆ ಬಗ್ಗೆ ಕೇಂದ್ರ ಗೃಹಸಚಿವಾಲಯವು (ಪಿ. ಚಿದಂಬರಂ) ತನ್ನ ವಿರೋಧವನ್ನು ಮುಂದುವರಿಸಿದ್ದು, ಅಸಲಿಗೆ ಯಾರು ಬೇಕಾದರೂ ಆಧಾರ ಕಾರ್ಡಿಗೆ ನೋಂದಾಯಿಸಿಕೊಳ್ಳಬಹುದು. ಯಾರು ಬೇಕಾದರೂ ಈ ಕಾರ್ಡ್ ಪಡೆಯಬಹುದು. ಅದರ ಮೇಲೆ ಹಿಡಿತವೇ ಇಲ್ಲ.

ಈ ವಿಷಯದಲ್ಲಿ ನಾಗರಿಕರ ಕುರಿತು ಗೃಹ ಸಚಿವಾಲಯ ಒದಗಿಸುವ ಮಾಹಿತಿ ಅಧಿಕೃತವಾಗಿರುತ್ತದೆ. ಆದರೆ ಸಚಿವಾಲಯದ ಇಂತಹ ಮಾಹಿತಿಯೇ ಬೇಡ ಎನ್ನುತ್ತಿದ್ದಾರೆ ಯುಐಡಿ ಯೋಜನೆಯ ಪ್ರಭೃತಿಗಳು ಎಂದು ಗೃಹ ಸಚಿವಾಲಯ ಕಿಡಿಕಾರಿದೆ.

ಈ ಸಂಬಂಧ ಸಚಿವಾಲಯವು ಪತ್ರ ಮುಖೇನ ಪ್ರಧಾನಿ ಮನಮೋಹನ್ ಸಿಂಗ್ ಅವರ ಗಮನ ಸೆಳೆದಿದೆ. ಯುಐಡಿ ಕಾರ್ಡಿನಲ್ಲಿ ನಕಲಿ ಮಾಹಿತಿಗಳು ದಾಖಲಾಗುವ ಸಾಧ್ಯತೆಗಳು ನಿಚ್ಚಳವಾಗಿವೆ. ದೇಶದ ರಕ್ಷಣಾ ವ್ಯವಸ್ಥೆಗೆ ಮಾರಕವಾಗುತ್ತದೆ ಎಂದು ಖುದ್ದು ಚಿದಂಬರಂ ಹೇಳಿದ್ದಾರೆ. ಇದರಿಂದಾಗಿ ನಂದನ್ ನಿಲೇಕಣಿ ಅವರ ಆಧಾರ ಕಾರ್ಡಿನ ಭವಿಷ್ಯ ಏನೋ, ಎಂತೋ ಎಂಬ ಆತಂಕದಲ್ಲಿದೆ.

English summary
With Nandan Nilekani's Unique Identification (UID) project hitting a roadblock, the row between UID Chairperson Nilekani and Home Minister Chidambaram has gone from bad to worse. In the note written by HM, the Home Secretary has mentioned that the UID data is not reliable and backed the claim stating that anyone can get themselves registered under any name with any address.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X