ಕೊಡಾಕ್ ಆತ್ಮಕ್ಕೆ ಚಿರಶಾಂತಿ ಕೋರುವ, ಇತಿ ನಿಮ್ಮ

Kodak Company
ನ್ಯೂಯಾರ್ಕ್, ಜ 20: ನೂರು ವರ್ಷಗಳ ಹಿಂದೆಯೇ ಛಾಯಾಚಿತ್ರ ಗ್ರಹಣವನ್ನು ಜಗತ್ತಿಗೆ ಪರಿಚಯಿಸಿದ ಅಮೆರಿಕಾ ಮೂಲದ ಪ್ರಮುಖ ಕೆಮೆರಾ ತಯಾರಿಕ ಕಂಪೆನಿ 'ಈಸ್ಟ್ಮನ್ ಕೊಡಾಕ್' ಕಂಪೆನಿ ದಿವಾಳಿಯಾಗಿದೆ. ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಕೊಡಾಕ್ ಕಂಪೆನಿ ದಿವಾಳಿತನಕ್ಕಾಗಿ ಗುರುವಾರ (ಜ 19) ಅರ್ಜಿ ಸಲ್ಲಿಸಿದೆ.

ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ನೌಕರರು, ನಿವೃತ್ತರು, ಸಾಲಗಾರರು ಮತ್ತು ಪಿಂಚಣಿದಾರರು ಸಹಿತ ಪಾಲುದಾರರಿಗೆ ಗುಪ್ತ ಮೌಲ್ಯವನ್ನು ಒದಗಿಸುವುದು ನಮ್ಮ ಏಕೈಕ ಗುರಿ. ನಮ್ಮ ಮೌಲ್ಯದಾಯಕ ಗ್ರಾಹಕರೊಂದಿಗೆ ಕೆಲಸ ಮಾಡಲು ನಾವು ಬದ್ದರಾಗಿದ್ದೇವೆ ಎಂದು ಕಂಪೆನಿ ಹೇಳಿಕೆ ನೀಡಿದೆ.

ಪ್ರಸಕ್ತ ಪರಿಸ್ಥಿತಿಯಲ್ಲಿ ಅಮೆರಿಕ ದಿವಾಳಿತನ ಕಾಯ್ದೆಯ ಪರಿಚ್ಛೇದ 11ರ ಪ್ರಯೋಜನಗಳನ್ನು ಪರಿಶೀಲಿಸಿದ ನಿರ್ದೇಶಕರ ಮಂಡಳಿ ಉತ್ಪನ್ನ ಆಡಳಿತ ದಿವಾಳಿತನಕ್ಕೆ ಅರ್ಜಿ ಸಲ್ಲಿಸುವುದು ಕೊಡಾಕ್ ಕಂಪೆನಿಯ ಭವಿಷ್ಯದ ದೃಷ್ಟಿಯಿಂದ ಅಗತ್ಯ ಅಂದು ಸಂಸ್ಥೆಯ ಮಂಡಳಿ ನಿರ್ಧಾರಕ್ಕೆ ಬಂದಿದೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕೆಮೆರಾ ಅಂದರೆ ಕೊಡಾಕ್ ಎನ್ನುವ ಕಾಲವಿತ್ತು. ಆದರೆ ಡಿಜಿಟಲ್ ಯುಗ ಆರಂಭವಾದ ನಂತರ ಅದರ ಜೊತೆ ಪೈಪೋಟಿ ನಡೆಸಲು ಮಟ್ಟಿಗೆ ವಿಫಲವಾದ ಕೊಡಾಕ್ 2003 ರಿಂದ ಸುಮಾರು 47 ಸಾವಿರ ನೌಕರರನ್ನು ಕೈಬಿಟ್ಟಿತ್ತು ಅಲ್ಲದೆ 13 ತಯಾರಿಕಾ ಘಟಕಗಳನ್ನೂ ಮುಚ್ಚಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+