ಯಡಿಯೂರಪ್ಪ ಬಗ್ಗೆ ph.d ವಿದ್ಯಾರ್ಥಿ ಏನನ್ನುತ್ತಾರೆ ?

'ಯಡಿಯೂರಪ್ಪ ಅವರದು ಅತ್ಯಂತ ಸಾಧಾರಣ ಆರಂಭವಾಗಿತ್ತು. ಜನರೇ ಅವರನ್ನು ಗುರುತಿಸಿದರು. ಚಳವಳಿಗಳಲ್ಲಿ ಅಗ್ರ ಜನನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ನಿಸ್ಸಂಶಯವಾಗಿ ಅವರೇ ಕಾರಣ.
ಅವರು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದಾಗ ಪಕ್ಷದ ವತಿಯಿಂದ ಇನ್ನೂ ಒಬ್ಬರು ಮಾತ್ರವೇ ಚುನಾಯಿತರಾಗಿದ್ದರು. ಆದರೆ ಅದೇ ಪಕ್ಷದ ಶಾಸಕರ ಸಂಖ್ಯೆ ಈಗ ಶತಕ ಬಾರಿಸಿದೆ' ಎಂದು ಯಡಿಯೂರಪ್ಪ ಬಗ್ಗೆ ತುಂಬು ಅಭಿಮಾನದಿಂದ ಹೇಳುತ್ತಾರೆ ಪ್ರಸನ್ನ ಕುಮಾರ್.
ಯಡಿಯೂರಪ್ಪ ಬಗ್ಗೆ ಪಿಎಚ್. ಡಿ ಮಾಡುವ ಸಲುವಾಗಿ ನಾನು ಮೊದಲು ಬೂಕನಕೆರೆಗೆ ಭೇಟಿ ನೀಡಿದೆ. ಯಡಿಯೂರಪ್ಪ ಎದುರು ಕುಳಿತು ಅವರ ಜೀವನದ ಪದರುಗಳನ್ನು ಬಿಡಿಸುತ್ತಾ ಹೋದೆ. ಅವರ ಅಂದಿನ ಒಡನಾಡಿಗಳ ಜತೆ ಆತ್ಮೀಯ ಚರ್ಚೆ ನಡೆಸಿದೆ.
ಅವರೊಬ್ಬ ಕಡುಕಷ್ಟ ಜೀವಿ ಎಂದು ಸ್ವತಃ ಅವರ ರಾಜಕೀಯ ವಿರೋಧಿಗಳೇ ಬಣ್ಣಿಸಿದರು ಎಂದು ಯಡಿಯೂರಪ್ಪ ಅಧ್ಯಯನ ವಿದ್ಯಾರ್ಥಿ ಪ್ರಸನ್ನ ಕುಮಾರ್ ತಮ್ಮ ಅನುಭವ ಹಂಚಿಕೊಳ್ಳುತ್ತಾರೆ.












Click it and Unblock the Notifications