ಯಡಿಯೂರಪ್ಪ ಈಗ Ph.D ಅಧ್ಯಯನ ವಿಷಯ

ಇತ್ತೀಚೆಗಷ್ಟೇ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಬಗ್ಗೆ ಡಾಕ್ಟರೇಟ್ ಅಧ್ಯಯನ ನಡೆದಿರುವುದು ತಿಳಿದುಬಂದಿತ್ತು. ಅಂದಹಾಗೆ ಈ ಹಿಂದೆ ಕರ್ನಾಟಕದಲ್ಲಿ ಎಚ್ ಡಿ ದೇವೇಗೌಡ, ಜೆಎಚ್ ಪಟೇಲ್, ಎಸ್ ಬಂಗಾರಪ್ಪ ಮತ್ತು ಎಸ್ಎಂ ಕೃಷ್ಣ ಬಗ್ಗೆಯೂ ಡಾಕ್ಟರೇಟ್ ಅಧ್ಯಯನ ನಡೆದಿತ್ತು. ಇದೀಗ ಯಡಿಯೂರಪ್ಪನವರ ಸರದಿ.
ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ರಾಜಕೀಯ ಶಾಸ್ತ್ರದಲ್ಲಿ ಪ್ರೊಫೆಸರ್ ಆಗಿರುವ ಮೂಲತಃ ಶಿಕಾರಿಪುರದ ಪ್ರಸನ್ನ ಕುಮಾರ್ ಅವರು ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸದ್ಯದಲ್ಲೇ 'B S Yeddyurappa"s Political Leadership: A Case Study' ವಿಷಯಾಧಾರಿತ ಡಾಕ್ಟರೇಟ್ ಥೀಸಿಸ್ ಅನ್ನು ಮಂಡಿಸಲು ಸಜ್ಜಾಗಿದ್ದಾರೆ.
ಅಂದಹಾಗೆ, ಪ್ರಸನ್ನ ಕುಮಾರ್ 2007ರ ಮೇ ನಿಂದ ಸದ್ದಿಲ್ಲದೆ ಈ ನಿಟ್ಟಿಲ್ಲಿ ಕಾರ್ಯಗತರಾಗಿದ್ದರು. ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರೊಫೆಸರ್ ಎಚ್ ಎಂ ರಾಜಶೇಖರ್ ಅವರು ಪ್ರಸನ್ನಗೆ ಗೈಡ್ ಆಗಿದ್ದಾರೆ.












Click it and Unblock the Notifications