ಯಡಿಯೂರಪ್ಪ ಹಗರಣ ಬಗ್ಗೆ ಅಧ್ಯಯನ ಮಾಡೋದಾ!?
ಬೆಂಗಳೂರು,
ಜ.18: ಅಷ್ಟಕ್ಕೂ ಯಡಿಯೂರಪ್ಪ ಸಂಶೋಧನೆಗೆ ಫ್ರೊ. ಪ್ರಸನ್ನ ಮನಸು ಮಾಡಿದ್ದು ಯಾವಾಗ !? ಎಂಬ ಪ್ರಶ್ನೆಗೆ 'ಯುವಕನಾಗಿದ್ದಾಗಿನಿಂದಲೂ ಯಡಿಯೂರಪ್ಪನವರ ರಾಜಕೀಯ ಏಳುಬೀಳುಗಳನ್ನು ಹತ್ತಿರದಿಂದ ಕಂಡಿದ್ದೆ. ಅಸ್ತಿತ್ವ ಕಂಡುಕೊಳ್ಳಲು ಅವರ ಪಕ್ಷ ಪರದಾಡುತ್ತಿದ್ದುದ್ದನ್ನು ನಿಕಟವಾಗಿ ಬಲ್ಲೆ. ಮುಂದೆ ವನ್ ಫೈನ್ ಡೆ ಯಡಿಯೂರಪ್ಪನವರು ಮುಖ್ಯಮಂತ್ರಿಯೇ ಆಗಿಬಿಟ್ಟರು. ಆಗ ನಾನು ಎದ್ದು ಕುಳಿತೆ. ಹೌದು. ಯಡಿಯೂರಪ್ಪನವರ ಬಗ್ಗೆ ಅಧ್ಯಯನ ನಡೆಸಲೇ ಬೇಕು ಎಂದು ತೀರ್ಮಾನಿಸಿದೆ' ಎನ್ನುತ್ತಾರೆ ಫ್ರೊ. ಪ್ರಸನ್ನ ಕುಮಾರ್. id="toptextpromo">'ಪಿಎಚ್.
ಡಿ ಅಧ್ಯಯನದ ವಸ್ತು ತಲೆಯಲ್ಲಿ ನುಸುಳಿದ್ದೇ ತಡ. ಅದಕ್ಕಾಗಿ ಪ್ರೊಫೆಸರ್ ರಾಜಶೇಖರ್ ಅವರನ್ನು ಭೇಟಿ ಮಾಡಿ ಚರ್ಚಿಸಿದೆ. ಅವರು ತುಂಬು ಪ್ರೋತ್ಸಾಹ ನೀಡಿದರು' ಎಂದು ಫ್ರೊ. ಪ್ರಸನ್ನ ಸ್ಮರಿಸಿದರು. id='are-slot-1' class='oiad oi-axt oiadv'> id='top-searched-articles'>ಅದೆಲ್ಲ
ಸರಿ ಯಡಿಯೂರಪ್ಪ ಭಾಗಿಯಾಗಿರುವ ಹಗರಣಗಳ ಬಗ್ಗೆಯೂ ಬರೆದಿದ್ದಾರಾ? ಎಂದು ಕೇಳಿದರೆ ಹಾವು ತುಳಿದವರಂತೆ ಭಾಸವಾದ ಫ್ರೊ. ಪ್ರಸನ್ನ, ಅವುಗಳ ಬಗ್ಗೆ ಎಲ್ಲ ಅಧ್ಯಯನ ಮಾಡಲು ಬರುವುದಿಲ್ಲ. ಅವೆಲ್ಲ ನಾನಾ ನ್ಯಾಯಾಲಗಳಲ್ಲಿವೆ. ಅಷ್ಟಕ್ಕ ನಾಣು ಅವುಗಳ ಬಗ್ಗೆ ಎಲ್ಲ ಬರೆದರೆ ನ್ಯಾಯಾಂಗ ನಿಂದನೆ ಆಗೊಲ್ವಾ ಎಂದು ಮರು ಪ್ರಶ್ನೆ ಹಾಕುತ್ತಾರಾ ಫ್ರೊ. ಪ್ರಸನ್ನ ಕುಮಾರ್!











Click it and Unblock the Notifications