ಈ ದಂಪತಿಗಳಿಗೆ ಐಐಟಿ ವಿದ್ಯಾರ್ಥಿಯ ವೀರ್ಯವೇ ಬೇಕಂತೆ!
ಮುಂಬೈ, ಜ. 18 : ಹುಡುಗ ಐಐಟಿ ವಿದ್ಯಾರ್ಥಿಯಾಗಿರಬೇಕು (ಬುದ್ಧಿವಂತನಾಗಿರಬೇಕು ಅಂತ ವಿಶೇಷವಾಗಿ ಹೇಳಬೇಕಾಗಿಲ್ಲ), ಆರೋಗ್ಯವಂತನಾಗಿರಬೇಕು, ಕೆಟ್ಟ ಚಟಗಳಿರಬಾರದು, ಎತ್ತರವಾಗಿರಬೇಕು, ಬೆಳ್ಳಗಿದ್ದರೆ ಉತ್ತಮ, ಸುಶೀಲನಾಗಿರಬೇಕು, ಅಂದವಾಗಿರದಿದ್ದರೂ ತೊಂದರೆಯಿಲ್ಲ.
ಇವುಗಳು ಕನ್ಯೆಯ ಮಾತಾಪಿತೃಗಳು ತಮ್ಮ ಮಗಳಿಗಾಗಿ ಹುಡುಕುತ್ತಿರುವ ವರನಲ್ಲಿರಬೇಕಾದ ಗುಣಗಳಲ್ಲ. ಚೆನ್ನೈನ ದಂಪತಿಗಳಿಬ್ಬರು ಕೇಳುತ್ತಿರುವುದು ಇಂತಹ ಸದ್ಗುಣ ಸಂಪನ್ನನ ವೀರ್ಯವನ್ನು! ದಯವಿಟ್ಟು ಐಐಟಿಯಲ್ಲಿ ಓದುತ್ತಿರುವ ಈ ಗುಣಗಳುಳ್ಳ ವ್ಯಕ್ತಿ ತನ್ನ ವೀರ್ಯ ದಾನ ಮಾಡಿ ಪುಣ್ಯ ಕಟ್ಟಿಕೊಳ್ಳಲಿ ಎಂದು ಆನ್‌ಲೈನ್ ಮುಖಾಂತರ ಜಾಹೀರಾತು ನೀಡಿದ್ದಾರೆ. [ಬ್ರಾಹ್ಮಣ ಹುಡುಗನ ವೀರ್ಯಕ್ಕೆ ಭಾರೀ ಬೇಡಿಕೆ]

ಈ ಸುದ್ದಿ ಭಾರತದ ಎಲ್ಲಾ ಐಐಟಿಗಳನ್ನು ಮಾತ್ರವಲ್ಲ, ಎಲ್ಲ ನಾಗರಿಕರನ್ನು ದಂಗುಬಡಿಸಿದೆ. ಕೇಳರಿಯದ ಈ ವಿದ್ಯಮಾನದಿಂದ ಸ್ತಂಭೀಭೂತರಾಗಿದ್ದಾರೆ. ಕೆಲವರಿಗೆ ಇದು ಸೋಜಿಗ ತಂದರೆ, ಕೆಲವರಿಗೆ ಸಾಕಷ್ಟು ಮುಜುಗರವನ್ನೂ ಉಂಟುಮಾಡಿದೆ. "ಇದು ಅಸಹ್ಯಕರ" ಎಂದು ಒಬ್ಬ ವಿದ್ಯಾರ್ಥಿ ಪ್ರತಿಕ್ರಿಯೆ ನೀಡಿದ್ದಾನೆ. ಬೇಕಿದ್ದರೆ ಐಐಟಿ-ಐಐಎಂ ಕಾಂಬಿನೇಷನ್ ವಿದ್ಯಾರ್ಥಿಯಿಂದ ವೀರ್ಯ ಪಡೆಯಲಿ ಎಂದು ಇನ್ನೊಬ್ಬ ವ್ಯಂಗ್ಯವಾಡಿದ್ದಾನೆ.
ಇಷ್ಟ ಇದ್ದವರು ಈಮೇಲ್ ಅಥವಾ ಎಸ್ಎಂಎಸ್ ಮುಖಾಂತರ ಸಂಪರ್ಕಿಸಬೇಕಾಗಿ ಕೋರಲಾಗಿದೆ. ವೀರ್ಯ ದಾನ ಮಾಡಿದವರಿಗೆ ನೀಡಲಾಗುವ ಮೊತ್ತ ಎಷ್ಟು ಗೊತ್ತೆ? 20 ಸಾವಿರ ರು. ಮಗುವಿಗಾಗಿ ಹಂಬಲಿಸುತ್ತಿರುವ ಈ ದಂಪತಿಗಳ ಕೋರಿಕೆಯನ್ನು ಯಾರಾದರೂ ಮನ್ನಿಸುವರೆ? [ಮೃತ ಪತಿಯ ವೀರ್ಯಕ್ಕಾಗಿ ಬೇಡಿಕೆ ಇಟ್ಟ ಪತ್ನಿ]












Click it and Unblock the Notifications