ಹೆಸರಿಗೆ ತಕ್ಕಂತೆ ನಡೆದುಕೊಂಡ 'ಟಪಾಲ್' ಗಣೇಶ್

reddy-rival-tapal-ganesh-sends-resignation-letter
ಬಳ್ಳಾರಿ, ಜ.17: ಕಳೆದ ವಾರ ಬಿಜೆಪಿಗೆ ಗುಡ್ ಬೈ ಹೇಳಿದ್ದ ಜಿಲ್ಲೆಯ ಗಣಿ ಉದ್ಯಮಿ ಟಪಾಲ್ ಗಣೇಶ್ ಇದೀಗ ಹೆಸರಿಗೆ ತಕ್ಕಂತೆ ನಡೆದುಕೊಂಡಿದ್ದಾರೆ. ಸಂಕ್ರಾಂತಿ ಮುಗಿದ ಮರು ದಿನವೇ 'ಟಪಾಲು ಮೂಲಕ' ಬಿಜೆಪಿ ರಾಜ್ಯಾಧ್ಯಕ್ಷರಿಗೆ ಅವರು ರಾಜೀನಾಮೆ ಪತ್ರ ಕಳಿಸಿಕೊಟ್ಟಿದ್ದಾರೆ. ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿರುವ ಪತ್ರದಲ್ಲಿ ರೆಡ್ಡಿಗಳ ಕಡು ವಿರೋಧಿ ಟಪಾಲ್‌ ಗಣೇಶ್‌ ಅವರು ತಮ್ಮ ರಾಜೀನಾಮೆಗೆ ಕಾರಣವೇನು ಎಂಬುದನ್ನು ಸ್ಪಷ್ಟ ಪಡಿಸಿದ್ದಾರೆ.

ರೆಡ್ಡಿ ಬೆಂಬಲಿಗ ಶಾಸಕರನ್ನು ಪಕ್ಷದಲ್ಲೇ ಮುಂದುವರಿಸುವ ಕುರಿತು ಬಿಜೆಪಿ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ತೀವ್ರ ಸಿಡಿಮಿಡಿ ವ್ಯಕ್ತಪಡಿಸಿರುವ ಟಪಾಲ್, ರೆಡ್ಡಿ ಶಾಸಕರನ್ನು ಪಕ್ಷದಲ್ಲೇ ಮುಂದುವರಿಸುವ ಪಕ್ಷದ ತೀರ್ಮಾನದಿಂದ ನನ್ನ ಹೋರಾಟಕ್ಕೆ ಹಿನ್ನಡೆಯಾಗಿದೆ ಎಂದು ಪ್ರತಿಪಾದಿಸಿದ್ದಾರೆ.

'ಬಳ್ಳಾರಿ ಗ್ರಾಮಾಂತರ ಉಪ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಮುಖಂಡರು ದೂರವಾಣಿ ಮೂಲಕ ನನ್ನನ್ನು ಸಂಪರ್ಕಿಸಿದ್ದರು. ರೆಡ್ಡಿ ಸೋದರರಿಂದ ಬಳ್ಳಾರಿಯಲ್ಲಿ ಹಲವಾರು ಲೋಪದೋಷಗಳು ನಡೆದಿವೆ. ಅವುಗಳನ್ನು ಸರಿಪಡಿಸಲು ನಿಮ್ಮಥವರ ಬೆಂಬಲ ಅವಶ್ಯಕವಾಗಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಸಕ್ರಮ ಗಣಿಗಾರಿಕೆಗೆ ಅವಕಾಶ ನೀಡುವ ಮೂಲಕ ನಿರುದ್ಯೋಗ ಸಮಸ್ಯೆ ಬಗೆಹರಿಸಲಾಗುವುದು ಎಂದಿದ್ದರು. ಆದರೆ ಚುನಾವಣೆ ಮುಗಿಯುತ್ತಿದ್ದಂತೆ ಬಿಜೆಪಿ ನಾಯಕರು ಉಲ್ಟಾ ಹೊಡೆದಿದ್ದಾರೆ' ಎಂದು ಗಣೇಶ್ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

ಈ ಮಧ್ಯೆ, ಟಪಾಲ್‌ ಗಣೇಶ್‌ ರಾಜೀನಾಮೆ ಪತ್ರ ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್‌ ಈಶ್ವರಪ್ಪ ಕೈಗೆ ತಲುಪಿಲ್ಲ. ಗಣೇಶ್‌ ರಾಜೀನಾಮೆ ಬಗ್ಗೆ ಪಕ್ಷ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದೂ ಸ್ಪಷ್ಟವಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+