ತುಲಾಭಾರ: 60 ಸಾವಿರ ನಾಣ್ಯ ತೂಗಿದ ಯಡಿಯೂರಪ್ಪ
ಶಿವಮೊಗ್ಗ,
ಜ.14: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರದು ಇತ್ತೀಚೆಗೆ ಚಿಲ್ರೆ ರಾಜಕೀಯ ಎನ್ನುವವರಿಗೆ ಇಲ್ಲಿದೆ ತಕ್ಕ ಉತ್ತರ. ಅದಕ್ಕೂ ಮುನ್ನ ಒಂದು ಪ್ರಶ್ನೆ. ಹೌದು ಯಡಿಯೂರಪ್ಪ ಅವರು ತುಲಾಭಾರ ಸೇವೆ ಮಾಡಿಸಿದರೆ ಎಷ್ಟು ನಾಣ್ಯ ತೂಗಬಹುದು? id="toptextpromo">ಈ
ಪ್ರಶ್ನೆಗೆ ಉತ್ತರವಾಗಿ ತಾಲೂಕಿನ ಬೆಜ್ಜವಳ್ಳಿಯ ಅಯ್ಯಪ್ಪಸ್ವಾಮಿ ದೇವಸ್ಥಾನ ಸನ್ನಿಧಿಯಲ್ಲಿ ಯಡಿಯೂರಪ್ಪ ಅವರು ಶುಕ್ರವಾರ ತುಲಾಭಾರ ಸೇವೆ ಅರ್ಪಿಸಿದರು. ಒಂದು ಕಡೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕುಳಿತರೆ, ಇನ್ನೊಂದು ಕಡೆ 60 ಸಾವಿರ ನಾಣ್ಯಗಳು ತೂಗಿದವು. id='are-slot-1' class='oiad oi-axt oiadv'> id='top-searched-articles'>ಬೆಜ್ಜವಳ್ಳಿಯಲ್ಲಿ
ನೂತನ ಹರಿಹರಾತ್ಮಜ ಪೀಠದ ನೂತನ ಶ್ರೀ ಗಳ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಿದ್ದ ಅವರು, ಮೊದಲು ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ವ್ಯವಸ್ಥೆ ಮಾಡಲಾಗಿದ್ದ ತುಲಾಭಾರ ಸೇವೆಯನ್ನು ಸಲ್ಲಿಸಿದರು.











Click it and Unblock the Notifications