ಜಯನಗರ ಕಾಂಪ್ಲೆಕ್ಸ್ ಸದ್ಯದಲ್ಲೇ ನೆಲಸಮ

Jayanagar BDA complex
ಬೆಂಗಳೂರು, ಜ.13: ಜಯನಗರ 4ನೇ ಬ್ಲಾಕ್ ನಲ್ಲಿರುವ ಶಾಪಿಂಗ್ ಕಾಂಪ್ಲೆಕ್ಸ್ ಇನ್ನು ನೆನಪು ಮಾತ್ರ. ಸುಮಾರು 40 ವರ್ಷ ಹಳೆಯದಾದ ಬೆಂಗಳೂರಿನ ಜನಪ್ರಿಯ ವಾಣಿಜ್ಯ ಸಂಕೀರ್ಣಗಳಲ್ಲಿ ಒಂದೆನಿಸಿರುವ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಕೆಡವಲಾಗುವುದು ಎಂದು ಬಿಬಿಎಂಪಿ ಅಧಿಕಾರಿ ರೂಪ ರಮೇಶ್ ಹೇಳಿದ್ದಾರೆ.

ಶಾಂಪಿಂಗ್ ಕಾಂಪ್ಲೆಕ್ಸ್ ನಲ್ಲಿ ಸುರಕ್ಷತಾ ನಿಯಮಗಳನ್ನು ಪಾಲಿಸಿಲ್ಲ. ಮೇಲಾಗಿ ಬಿಡಿಎ ಮೂಲಕ ಕಟ್ಟಡದ ನವೀಕರಣಕ್ಕೆ ಸ್ಥಳೀಯ ಶಾಸಕರು ಒಲವು ತೋರಿದ್ದಾರೆ. ಫೆಬ್ರವರಿ ಕೊನೆ ವೇಳೆಗೆ ಎಲ್ಲಾ ವರ್ತಕರು ಜಾಗ ತೆರವುಗೊಳಿಸಲು ಸೂಚಿಸಲಾಗಿದೆ ಎಂದು ರೂಪ ತಿಳಿಸಿದ್ದಾರೆ.

ಕಾರಣಗಳು, ಪರಿಹಾರ, ಸಮಸ್ಯೆ:
* ಜೂನ್ 12,2008ರಲ್ಲಿ ಶಾರ್ಟ್ ಸರ್ಕೀಟ್ ಪರಿಣಾಮವಾಗಿ ಅಗ್ನಿ ದುರಂತ ಸಂಭವಿಸಿತ್ತು. ಸುಮಾರು 40 ಅಂಗಡಿಗಳು ಬೆಂಕಿಗೆ ಆಹುತಿಯಾಗಿದ್ದವು.
* ಜೂನ್ 2009ರಲ್ಲಿ 1.70 ಕೋಟಿ ವೆಚ್ಚದಲ್ಲಿ ಅಗ್ನಿ ಶಾಮಕದಳದವರು ಸಾಧಕಗಳನ್ನು ಅಳವಡಿಸಿದ್ದರು. ಆದರೆ, ಇನ್ನೂ ಪ್ರದರ್ಶನಕ್ಕೆ ಇಟ್ಟ ಬೊಂಬೆಯಂತಾಗಿದೆ. ಪ್ರಯೋಜನಕ್ಕೆ ಬಂದಿಲ್ಲ. ಕಾರಣ ಆರ್ಥಿಕ ಅನುದಾನ ಸಿಕ್ಕಿಲ್ಲವಂತೆ.
* ಬೆಂಕಿ ಬಿದ್ದ ಸ್ಥಳದಲ್ಲೇ ಅಂಗಡಿಗಳು ತಲೆ ಎತ್ತಿತ್ತು. ಸಾವಿರಾರು ಜನರ ದೈನಂದಿನ ಬದುಕಿನ ಭಾಗವಾಗಿರುವ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ಅಗ್ನಿ ಸುರಕ್ಷತೆ ಬಗ್ಗೆ ಗಮನ ಹರಿಸಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ದೂರಿದ್ದಾರೆ.

ವರ್ತಕರ ಅಳಲು: ಜಯನಗರ ನಾಲ್ಕನೇ ಬ್ಲಾಕಿನ ವಾಣಿಜ್ಯ ಸಂಕೀರ್ಣ ವರ್ತಕರ ಸಂಘ(JFBCCMA)ದ ಅಧ್ಯಕ್ಷ ಎಂ ಬಸವರಾಜು ಹೇಳುವ ಪ್ರಕಾರ, ಬಿಬಿಎಂಪಿ ಸೂಚಿಸಿದಂತೆ ಸುರಕ್ಷತಾ ನಿಯಮಗಳನ್ನು ಎಲ್ಲಾ ವರ್ತಕರು ಪಾಲಿಸುತ್ತಿದ್ದಾರೆ.

ಪಿಲ್ಲರ್ ಗಳಿಗೆ ಹಾನಿಯಾದರೂ ಕಟ್ಟಡಕ್ಕೆ ಏನು ತೊಂದರಯಾಗುವುದಿಲ್ಲ. ಬಿಬಿಎಂಪಿ ಕ್ರಮದಿಂದ ವರ್ತಕರಿಗೆ ದಿಕ್ಕುತೋಚದಂತಾಗಿದೆ ಎಂದು ಬಸವರಾಜು ಹೇಳುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+