ರಾಜ್ಯದ ಆಡಳಿತ ಆರೆಸ್ಸೆಸ್ ಕೈಯಲ್ಲಿ: ಸಂಸದ ವಿಶ್ವನಾಥ್
ಬೆಂಗಳೂರು,
ಜ.13: ಅಭಿವೃದ್ಧಿಯಲ್ಲಿ ಒಂದನೇ ಸ್ಥಾನದಲ್ಲಿರುವ ರಾಜ್ಯವನ್ನು ಇದೀಗ ಆರೆಸ್ಸೆಸ್ ನಿಯಂತ್ರಿಸುವ ಸ್ಥಿತಿ ಉಂಟಾಗಿದೆ. ಈ ಪರಿವಾರ ಹಿಂದೂಗಳನ್ನು ಉದ್ಧಾರ ಮಾಡುವುದಾಗಿ ಹೇಳುತ್ತಿದೆ. ಹಾಗಾದರೆ, ಬಿಜೆಪಿಯವರು ಮಾತ್ರ ಹಿಂದೂಗಳೇ? ಇತರೆ ಪಕ್ಷದಲ್ಲಿ ಹಿಂದೂಗಳು ಇಲ್ಲವೇ? ಎಂದು ಸಂಸದ ಎಚ್. ವಿಶ್ವನಾಥ್ ಪ್ರಶ್ನಿಸಿದ್ದಾರೆ. id="toptextpromo">ಆರೆಸ್ಸೆಸ್‌ನವರು
ರಾಜ್ಯದ ರಾಜಕೀಯ ಮತ್ತು ಆಡಳಿತವನ್ನು ನಿಯಂತ್ರಿಸುತ್ತಿದ್ದಾರೆ. ಇವರಿಗೆ ಈ ಅಧಿಕಾರ ಕೊಟ್ಟವರು ಯಾರು? ಇವರು ಸಂವಿಧಾನ ಮೀರಿ ವರ್ತಿಸುತ್ತಿದ್ದಾರೆ. ಇವರು ಆಡಳಿತದ ಅಧೋಗತಿಯ ಸಂಕೇತ. ಯಾರದೋ ಉದ್ಯಮಿ ಮನೆಯಲ್ಲಿ ಸಂಘ ಪರಿವಾರದವರು ರಾಜ್ಯದ ನಾಯಕತ್ವವನ್ನು ತೀರ್ಮಾನಿಸುವುದು ನಮ್ಮ ಆಡಳಿತದ ದೌರ್ಬಲ್ಯಕ್ಷೆ ಸಾಕ್ಷಿ ಎಂದು ವಿಶ್ವನಾಥ್ ಕಿಡಿಕಾರಿದರು. id='are-slot-1' class='oiad oi-axt oiadv'> id='top-searched-articles'>ಆರೆಸ್ಸೆಸ್‌ನವರು
ಉಗ್ರಗಾಮಿಗಳು:
ಆರೆಸ್ಸೆಸ್‌ನವರು
ಯಾರದೋ
ಹೆಸರಿನಲ್ಲಿ
ದುಷ್ಕೃತ್ಯ
ನಡೆಸಿ,
ಸಮಾಜದ
ಸ್ವಾಸ್ಥ್ಯ
ಕೆಡಿಸುತ್ತಿದ್ದಾರೆ.
ಪಾಕ್
ಧ್ವಜ
ಹಾರಿಸಿ,
ರಾಜ್ಯದಲ್ಲಿ
ಉದ್ವಿಗ್ನ
ಪರಿಸ್ಥಿತಿ
ನಿರ್ಮಾಣ
ಮಾಡುತ್ತಾರೆ.
ಇವರು
ನಿಜಕ್ಕೂ
ಉಗ್ರಗಾಮಿಗಳು.
ಇಂಥವರು
ರಾಜ್ಯದ
ಆಡಳಿತವನ್ನು
ನಿಯಂತ್ರಿಸುತ್ತಿರುವುದು
ದುರಾದೃಷ್ಟಕರ
ಎಂದು
ವಿಶ್ವನಾಥ್
ಹೇಳಿದ್ದಾರೆ.












Click it and Unblock the Notifications