ನೀರಿನ ಟ್ಯಾಂಕಿಗೆ ಬಿದ್ದು 9 ವರ್ಷದ ಬಾಲಕ ಸಾವು
ಹೊಸಕೋಟೆ
(ಬೆಂಗಳೂರು), ಜ. 13: ಕುಡಿಯುವ ನೀರಿನ ಟ್ಯಾಂಕಿನಿಂದ ನೀರು ತೆಗೆಯಲು ಹೋದಾಗ ಟ್ಯಾಂಕಿನೊಳಕ್ಕೆ ಬಿದ್ದು 9 ವರ್ಷದ ವಿದ್ಯಾರ್ಥಿಯೊಬ್ಬ ಸಾವಿಗೀಡಾಗ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ. id="toptextpromo">ಹೊಸಕೋಟೆಯ
ಭಕ್ತರಹಳ್ಳಿಯ ಕಿರಿಯ ಪ್ರಾಥಮಿಕ ಶಾಲೆಯ ಮೂರನೇ ತರಗತೊಯ ವಿದ್ಯಾರ್ಥಿ ಸತೀಶ್ ದುರ್ಮರಣಕ್ಕೀಡಾದ ಬಾಲಕ. ದುರ್ದೈವಿ ಬಾಲಕ ಸತೀಶ್ ಸಂಪ್ ನಿಂದ ನೀರು ತೆಗೆಯಲು ಹೋದಾಗ ಕಾಲು ಜಾರಿ ಸಂಪಿನೊಳಕ್ಕೆ ಬಿದ್ದು ಅಸುನೀಗಿದ್ದಾನೆ. id='are-slot-1' class='oiad oi-axt oiadv'> id='top-searched-articles'>ಸಂಪ್
ಹೆಚ್ಚು ಆಳವಾಗಿದ್ದು ಸಂಪೂರ್ಣವಾಗಿ ನೀರಿನಿಂದ ಭರ್ತಿಯಾಗಿತ್ತು. ನೀರಿನಲ್ಲಿ ಬಿದ್ದ ಬಾಲಕ ಉಸಿರುಗಟ್ಟಿ ಅಸುನೀಗಿದ್ದಾನೆ ಎಂದು ಹೊಸಕೋಟೆ ಪೊಲೀಸರು ತಿಳಿಸಿದ್ದಾರೆ. ವಿದ್ಯಾರ್ಥಿಯ ಮೃತದೇಹವನ್ನು ಸಂಪಿನಿಂದ ಹೊರತೆಗೆಯಲಾಗಿದೆ.











Click it and Unblock the Notifications