ರೆಡ್ಡಿಗೆ ಬರ್ತ್ ಡೆ ಗಿಫ್ಟ್ ಕೊಟ್ಟ ಸಿಬಿಐ ಕೋರ್ಟ್

ಬುಧವಾರ ರೆಡ್ಡಿ ಜಾಮೀನು ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ಸ್ವಲ್ಪಹೊತ್ತಿನಲ್ಲೇ ಕೋರ್ಟ್, ವಿಚಾರಣೆಯನ್ನು ಜನವರಿ 23ಕ್ಕೆ ಮುಂದೂಡಿತು. ಇದರಿಂದ ಬಳ್ಳಾರಿಯಲ್ಲಿ ರೆಡ್ಡಿ ಅಭಿಮಾನಿಗಳು ತೀವ್ರ ನಿರಾಶೆಗೊಳಗಾದರು. ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸೆ. 5ರಿಂದ ಜೈಲಿನಲ್ಲಿದ್ದಾರೆ.
ರೆಡ್ಡಿ ಸಲ್ಲಿಸಿದ್ದ 3 ಜಾಮೀನು ಅರ್ಜಿಗಳು ಮತ್ತು ಒಂದು ತಾತ್ಕಾಲಿಕ ಜಾಮೀನು ಅರ್ಜಿ ನಾಂಪಲ್ಲಿಯ ಕೋರ್ಟಿನಲ್ಲಿ ಈಗಾಗಲೇ ತಿರಸ್ಕೃತವಾಗಿದೆ. ಆದರೆ ಮೂರನೆಯ ಸಾಮಾನ್ಯ ಅರ್ಜಿಗೆ ಸಂಬಂಧಿಸಿದಂತೆ ರೆಡ್ಡಿ ಮರುವಿಚಾರಣೆ ಕೇಳಿಕೊಂಡಿದ್ದ ಹಿನ್ನೆಲೆಯಲ್ಲಿ ಅವರ ಜನ್ಮದಿನವಾದ ಇಂದು (ಜ.11) ಕೋರ್ಟ್ ಜಾಮೀನು ಅರ್ಜಿ ವಿಚಾರಣೆನ್ನು ಕೈಗೆತ್ತಿಕೊಂಡಿತ್ತು.
ಈ ಮಧ್ಯೆ, ರೆಡ್ಡಿ ಸೋದರ ಸೋಮಶೇಖರ ರೆಡ್ಡಿ ಅವರು ಅಭಿಮಾನಿಗಳ ಜತೆ ಸೇರಿ ತಮ್ಮ ಸೋದರನ ಹುಟ್ಟುಹಬ್ಬಕ್ಕೆ ಬಳ್ಳಾರಿಯ ನಾನಾ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು, ಚರ್ಚುಗಳಲ್ಲಿ ಪ್ರಾರ್ಥನೆಗಳನ್ನು ನಡೆಸುತ್ತಿದ್ದಾರೆ.












Click it and Unblock the Notifications