ರೈತ ಸಂಘ ಎಂದೂ ಒಡೆಯುವುದಿಲ್ಲ : ಪುಟ್ಟಣ್ಣಯ್ಯ

ಫೆ.13ರಂದು ರೈತ ಸಂಘದ ಸಂಸ್ಥಾಪಕ ಪ್ರೊ. ನಂಜುಂಡಸ್ವಾಮಿಯವರ ಜನ್ಮ ದಿನವಾಗಿದೆ. ಅಂದು ರಾಜ್ಯ ಸಮಿತಿ ಸೇರಿದಂತೆ ಅಧ್ಯಕ್ಷರು, ಕಾರ್ಯಾಧ್ಯಕ್ಷರ ನೇಮಕವೂ ನಡೆಯಲಿದೆ. ಅಲ್ಲಿ ತನಕ ಹಾಲಿ ಕಾರ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸುಮ್ಮನಿದ್ದರೆ ಒಳ್ಳೆಯದು ಇಲ್ಲದಿದ್ದರೆ ಉಚ್ಚಾಟನೆ ಅನಿವಾರ್ಯ ಎಂದು ಪುಟ್ಟಣ್ಣಯ್ಯ ಹೇಳಿದ್ದಾರೆ.
ರಾಜ್ಯ ರೈತ ಸಂಘದ ಇಬ್ಬರು ನಾಯಕರ ನಡುವಿನ ಭಿನ್ನಾಭಿಪ್ರಾಯದಿಂದ ರಾಜ್ಯದ ರೈತರು ಸಹಜವಾಗಿ ಗೊಂದಲಕ್ಕೀಡಾಗಿದ್ದಾರೆ. ರೈತ ಸಂಘ ಅಧಿಕೃತವಾಗಿ ಇಬ್ಭಾಗವಾದರೆ ಮುಂದೇ ಗತಿ ಏನು? ಎಂದು ಚಿಂತೆ ಎಲ್ಲೆಡೆ ಹಬ್ಬುತ್ತಿದೆ.
ರೈತ ಸಂಘಕ್ಕೆ ಕಾರ್ಯಾಧ್ಯಕ್ಷ ಮತ್ತು ಅಧ್ಯಕ್ಷ ನಾನೇ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿಕೊಂಡು ಅಶಿಸ್ತು ತೋರಿದ್ದಾರೆ. ಅವರನ್ನು ರೈತ ಸಂಘದಿಂದಲೇ ಉಚ್ಚಾಟಿಸುವ ಬಗ್ಗೆ ಸಂಘದ ಕೋರ್ ಕಮಿಟಿಗೆ ದೂರುಗಳು ಬಂದಿವೆ. ಇದು ನನ್ನ ವೈಯಕ್ತಿಕ ನಿರ್ಧಾರವಲ್ಲ ಎಂದು ಪುಟ್ಟಣ್ಣಯ್ಯ ಸ್ಪಷ್ಟಪಡಿಸಿದ್ದಾರೆ.












Click it and Unblock the Notifications