ಏರ್ ಇಂಡಿಯಾ ಟಿಕೇಟ್ ಪ್ರಯಾಣಿಕರೇ, ಗಮನಿಸಿ

ಆದರೆ, ಏರ್ ಇಂಡಿಯಾ ಸಿಬ್ಬಂದಿ ವಿಮಾನ ಏರುವುದಿಲ್ಲ ಎಂದು ಮುಷ್ಕರ ಹೂಡಿದ್ದಾರೆ. ಹೀಗಾಗಿ ಏರ್ ಇಂಡಿಯಾ ಟಿಕೆಟ್ ಬುಕ್ ಮಾಡುವ ಮುನ್ನ ಪ್ರಯಾಣಿಕರು ಯೋಚಿಸುವುದು ಒಳಿತು.
ಏರ್ ಇಂಡಿಯಾ ಬ್ಯಾಂಕ್ ಖಾತೆ ಮುಟ್ಟು ಗೋಲು ಹಾಕಿಕೊಳ್ಳುವುದಿಲ್ಲ ಎಂದು ಕೇಂದ್ರ ತೆರಿಗೆ ಮತ್ತು ಸುಂಕ ಇಲಾಖೆ ಆಶ್ವಾಸನೆ ನೀಡಿತ್ತು. ಅದರಂತೆ, ನವೆಂಬರ್ ತಿಂಗಳ ತೆರಿಗೆ ಬಾಕಿ ಮೊತ್ತ ನೀಡಿದ್ದ ಏರ್ ಇಂಡಿಯಾ ಎಲ್ಲವೂ ಸುಸೂತ್ರವಾಗಿದೆ ಎಂದು ಕೊಂಡಿತ್ತು. ಸರ್ಕಾರ ಕೂಡಾ 30,000 ಕೋಟಿ ರು ಬಂಡವಾಳ ಹೂಡಿಕೆ ಬಗ್ಗೆ ಪ್ರಕಟಿಸಿತ್ತು.
ಆದರೆ, ಕಿಂಗ್ ಫಿಷರ್ ಸಂಸ್ಥೆಯ ರೀತಿಯಲ್ಲೇ ತನ್ನ ಸಿಬ್ಬಂದಿಗಳಿಗೆ ಸಂಬಳ ನೀಡುವಲ್ಲಿ ವಿಫಲವಾದ ಕಾರಣ ಮತ್ತೆ ಏರ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದೆ.
ಮೊದಲು ಸಂಬಳ ಕೊಡಿ : ಎರಡು ತಿಂಗಳ ಸಂಬಳ ಹಾಗೂ ಐದಾರು ತಿಂಗಳ ಭತ್ಯೆ ಬಾಕಿ ಮೊದಲು ನೀಡಲಿ ನಂತರ ವಿಮಾನ ಹತ್ತುತ್ತೇವೆ ಎಂದು ಸೋಮವಾರ ಏರ್ ಇಂಡಿಯಾ ಸಿಬ್ಬಂದಿ ದಿಢೀರ್ ಎಂದು ಮುಷ್ಕರ ಹೂಡಿದ ಘಟನೆ ನಡೆದಿದೆ.
ದೇಶಿ ವಿಮಾನಯಾನವಾದರೆ ಪರವಾಗಿಲ್ಲ. ಆದರೆ, ವಿದೇಶಕ್ಕೆ ಹೋದಾಗ ಊಟ ಮಾಡಲು ನಮ್ಮ ಬಳಿ ಹಣ ಇರುವುದಿಲ್ಲ. ಸಂಬಳ ಇಲ್ಲದೆ ಕೆಲಸ ಅಸಾಧ್ಯ ಎಂದು ಏರ್ ಇಂಡಿಯಾ ಸಿಬ್ಬಂದಿ ತಮ್ಮ ಅಳಲು ತೋಡಿಕೊಂಡಿದ್ದಾರೆ.












Click it and Unblock the Notifications