ಶಾಸಕ ಪ್ರಿಯಕೃಷ್ಣನಿಗೆ ಲೋಕಾಯುಕ್ತ ತನಿಖೆ ಭೀತಿ
ಬೆಂಗಳೂರು,
ಜ.9: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರಿಯಕೃಷ್ಣ ಹಾಗೂ ಆತನ ತಂದೆ ಶಾಸಕ ಲೇಔಟ್ ಕೃಷ್ಣಪ್ಪ ಅಲಿಯಾಸ್ ಎಂ ಕೃಷ್ಣಪ್ಪ ಅವರ ಮೇಲೆ ಆದಾಯಕ್ಕಿಂತ ಹೆಚ್ಚಿನ ಆಸ್ತಿಗಳಿಸಿರುವ ಆರೋಪ ಹೊರೆಸಿ ಲೋಕಾಯುಕ್ತ ಕೋರ್ಟ್ ಗೆ ವಕೀಲರೊಬ್ಬರು ದೂರು ನೀಡಿದ್ದಾರೆ. id="toptextpromo">ಬೆಂಗಳೂರಿನ
ವಕೀಲ ಎಚ್ ಪ್ರಕಾಶ್ ಅವರು ಕಾಂಗ್ರೆಸ್ ಶಾಸಕರಾದ ಪ್ರಿಯಕೃಷ್ಣ ಹಾಗೂ ತಮ್ಮ ಪ್ರದೀಪಕೃಷ್ಣ, ಅಪ್ಪ ಎಂ ಕೃಷ್ಣಪ್ಪ ಅವರ ಪತ್ನಿ ಪ್ರಿಯದರ್ಶಿನಿ ವಿರುದ್ಧ ಸೋಮವಾರ(ಜ.9) ದೂರು ನೀಡಿದ್ದಾರೆ. ಖಾಸಗಿ ದೂರನ್ನು ಸ್ವೀಕರಿಸಿದ ಲೋಕಾಯುಕ್ತ ವಿಶೇಷ ನ್ಯಾ. ಸುಧೀಂದ್ರರಾವ್ ಅವರು ಪ್ರಕರಣದ ತನಿಖೆಯನ್ನು ಜ.12ಕ್ಕೆ ಮುಂದೂಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಕರ್ನಾಟಕದ
ಅತ್ಯಂತ ಶ್ರೀಮಂತ ಶಾಸಕ ಎನಿಸಿರುವ ಪ್ರಿಯಕೃಷ್ಣರ ಘೋಷಿತ ಆಸ್ತಿ ಮೊತ್ತವೇ(2009ರಲ್ಲಿ) 800 ಕೋಟಿ ರು ಮೀರುತ್ತದೆ. ಆದರೆ, ಅಪ್ಪ ಹಾಗೂ ಮಗ ಇಬ್ಬರು ಲೋಕಾಯುಕ್ತ ಸಂಸ್ಥೆಗೆ, ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ದಾಖಲೆಗೂ ಘೋಷಿತ ಆಸ್ತಿ ವಿವರಗಳಿಗೂ ತಾಳೆಯಾಗುತ್ತಿಲ್ಲ ಎಂದು ವಕೀಲ ಪ್ರಕಾಶ್ ಆರೋಪಿಸಿದ್ದಾರೆ.











Click it and Unblock the Notifications