ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರವಾರದಲ್ಲಿ ಚರಸ್ ಸ್ಮಗಲ್ ಮಾಡುತ್ತಿದ್ದ ಮಹಿಳೆ ಬಂಧನ

By Prasad
|
Google Oneindia Kannada News

Woman caught with Charas in Karwar
ಕಾರವಾರ, ಜ. 7 : 80 ಲಕ್ಷ ರು. ಮೌಲ್ಯದ, 4.25 ಕಿ.ಗ್ರಾಂ. ತೂಕದ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ 28 ವರ್ಷದ ಮಹಿಳೆಯನ್ನು ಕಾರವಾರ ಗ್ರಾಮೀಣ ಪೊಲೀಸ್ ಮತ್ತು ರೈಲ್ವೆ ಇಲಾಖೆಯ ಪೊಲೀಸ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ.

ಹಿಮಾಚಲ ಪ್ರದೇಶದ ಹುಲು ಪ್ರದೇಶದ ನಿವಾಸಿಯಾಗಿರುವ ಗೋಲ್ಮಾ ದೇವಿ ಬ್ಯಾಗ್ ತುಂಬ ಚರಸ್ ತುಂಬಿಕೊಂಡು ಹೋಗುತ್ತಿದ್ದಾಗ ರೈಲ್ವೆ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಆಕೆಯ ಜೊತೆಗಿದ್ದ ನಾರಾಯಣ್ ಸಿಂಗ್ ರಾಥೋಡ್ ಎಂಬಾತ ಪರಾರಿಯಾಗಿದ್ದಾನೆ ಎಂದು ಸುಪರಿಂಟೆಂಡೆಂಟ್ ಆಫ್ ಪೊಲೀಸ್ ಕೆಟಿ ಬಾಲಕೃಷ್ಣ ತಿಳಿಸಿದ್ದಾರೆ.

ಇಬ್ಬರೂ ಚರಸ್ ಅನ್ನು ಗೋವಾಗೆ ತೆಗೆದುಕೊಂಡು ಹೋಗುತ್ತಿದ್ದರು. ಇಬ್ಬರೂ ಸಂಶಯಾತ್ಮಕವಾಗಿ ಅಡ್ಡಾಡುತ್ತಿದ್ದಾಗ ಪೊಲೀಸರು ನಡೆಸಿದ ತಪಾಸಣೆಯಲ್ಲಿ ಸಿಕ್ಕಿಬಿದ್ದಿದ್ದಾರೆ. ಇಷ್ಟು ದೊಡ್ಡ ಮಟ್ಟದ ಮಾದಕ ವಸ್ತು ಇಲ್ಲಿ ದೊರೆತಿದ್ದು ಇದೇ ಮೊದಲು ಎಂದು ಪೊಲೀಸರು ಹೇಳಿದ್ದಾರೆ.

ನಾರಾಯಣ ಕಳೆದ ನಾಲ್ಕು ವರ್ಷಗಳಿಂದ ಕಾರವಾರದಲ್ಲಿ ನೆಲೆಸಿದ್ದು, ತರಕಾರಿ ಮಾರಿಕೊಂಡಿ ಜೀವನ ಸಾಗಿಸುತ್ತಿದ್ದಾನೆ. ಆದರೆ, ಗೋಲ್ಮಾ ಮಾತ್ರ ಮಾದಕ ವಸ್ತು ಸಾಗಾಟದ ದಂಧೆಯಲ್ಲಿ ತೊಡಗಿದ್ದಾಳೆ. ಆ ಬ್ಯಾಗ್ ನಾರಾಯಣ್ ಸೇರಿದ್ದು, ನನಗೂ ಅದಕ್ಕೂ ಸಂಬಂಧವಿಲ್ಲ ಎಂದು ಗೋಲ್ಮಾ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ.

English summary
A 28-year-old woman Golma Devi from Himachal Pradesh was caught smuggling grugs at Karwar railway station by Karwar rural police and railway police in a joint operation on Friday. Golma Devi was carrying Charas worth 80 Lakh rupees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X