ತೀರ್ಥಹಳ್ಳಿ-ಕುಂದಾಪುರ ಬಾಳೆಬರೆ ಘಾಟ್ ಸಂಚಾರ ಬದಲು

ಈ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ಜ.3ರಿಂದ ಮಾರ್ಚ್ 31ರವರೆಗೆ ಅಥವಾ ಕಾಮಗಾರಿ ಮುಕ್ತಾಯ ಗೊಳ್ಳುವವರೆಗೆ ನಿಷೇಧಿಸಲಾಗಿದೆ. ಈ ಅವಧಿಯಲ್ಲಿ ವಾಹನಗಳ ಸಂಚಾರಕ್ಕೆ ಬದಲಿ ವ್ಯವಸ್ಥೆಯನ್ನು ಸೂಚಿಸಲಾಗಿದೆ ಎಂದು ಉಡುಪಿ ಹಾಗೂ ಶಿವಮೊಗ್ಗ ಜಿಲ್ಲಾಡಳಿತ ಹೇಳಿದೆ.
ಬದಲಿ ವ್ಯವಸ್ಥೆ: ಕುಂದಾಪುರದಿಂದ - ಶಿವಮೊಗ್ಗಕ್ಕೆ ಹೋಗುವ ವಾಹನಗಳು
ಕುಂದಾಪುರದಿಂದ ಕೊಲ್ಲೂರಿಗೆ ಹೋಗಿ ನಾಗೋಡಿ ಘಾಟ್ ರಸ್ತೆಯ ಮೂಲಕ ಹೊಸನಗರ- ರಿಪ್ಪನ್‌ಪೇಟೆ ಮಾರ್ಗವಾಗಿ ಶಿವಮೊಗ್ಗ ತಲುಪಬಹುದು.
ಇನ್ನೊಂದು ಮಾರ್ಗ: ಕೊಲ್ಲೂರು ಮಾರ್ಗವಾಗಿ ಹೋಗಿ ನಾಗೋಡಿ ಘಾಟಿ ರಸ್ತೆಯ ಮೂಲಕ ನಗರ, ಮಾಸ್ತಿಕಟ್ಟೆ-ತೀರ್ಥಹಳ್ಳಿ ಮಾರ್ಗವಾಗಿ ಶಿವಮೊಗ್ಗ ತಲುಪಬಹುದು.
ಕುಂದಾಪುರ - ಶಿವಮೊಗ್ಗಕ್ಕೆ ಹೋಗುವ ಲಘು ವಾಹನಗಳು - ಹಾಲಾಡಿ - ಸೊಮೇಶ್ವರ ಮಾರ್ಗವಾಗಿ, ಆಗುಂಬೆ ಘಾಟ್ ಮೂಲಕ ತೀರ್ಥಹಳ್ಳಿ ಮಾರ್ಗವಾಗಿ ಶಿವಮೊಗ್ಗಕ್ಕೆ ತೆರಳಬಹುದು.
ಉಡುಪಿಯಿಂದ-ಶಿವಮೊಗ್ಗಕ್ಕೆ ಹೋಗುವ ಲಘುವಾಹನಗಳು ಉಡುಪಿಯಿಂದ - ಹೆಬ್ರಿ -ಸೋಮೇಶ್ವರ ಮಾರ್ಗವಾಗಿ ಆಗುಂಬೆ ಘಾಟ್ ಅನುಸರಿಸಬಹುದು.
ಶಿವಮೊಗ್ಗ ಹೋಗುವ ಘನ ವಾಹನಗಳು ಉಡುಪಿಯಿಂದ- ಕಾರ್ಕಳ ಮಾರ್ಗವಾಗಿ ಕೆರೆಕಟ್ಟೆ-ಶೃಂಗೇರಿ-ಬೇಗಾರು, ಬಿದ್ರಗೋಡು ಆಗುಂಬೆ- ತೀರ್ಥಹಳ್ಳಿ ಮುಖಾಂತರ ಶಿವಮೊಗ್ಗ ತಲುಪಬಹುದು.












Click it and Unblock the Notifications