ಮೆಟ್ರೋ ರೈಲು 2ನೇ ಹಂತಕ್ಕೆ 27 ಸಾವಿರ ಕೋ ಬಿಡುಗಡೆ

ಜಪಾನ್ ಸರ್ಕಾರದ 'ಜೈಕಾ' ಸಂಸ್ಥೆಯಿಂದ ಆರ್ಥಿಕ ನೆರವು ಪಡೆದು ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಯೋಜನೆಯ ಕಾಮಗಾರಿ ನಿರ್ವಹಣೆಯನ್ನು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ನೋಡಿಕೊಳ್ಳಲಿದೆ.
2013ಕ್ಕೆ ಮೊದಲ ಹಂತದ ಎಲ್ಲಾ ಮೆಟ್ರೋ ರೈಲು ನಿಲ್ದಾಣಗಳು ಪೂರ್ಣಗೊಳ್ಳಲಿದೆ. ಮೆಜೆಸ್ಟಿಕ್ ಮೆಟ್ರೊ ರೈಲು ನಿಲ್ದಾಣ ನಿರ್ಮಾಣ ಆರೇಳು ತಿಂಗಳು ತಡವಾಗಲಿದೆ ಎಂದು ಸಚಿವ ಬೊಮ್ಮಾಯಿ ಹೇಳಿದರು.
ಮಾರ್ಗಗಳು: ಜಯನಗರದಿಂದ ಎಲೆಕ್ಟ್ರಾನಿಕ್ ಸಿಟಿವರೆಗಿನ ಹೊಸ ಮಾರ್ಗ ಜಯದೇವ ಆಸ್ಪತ್ರೆ, ಬಿಟಿಎಂ ಬಡಾವಣೆ ಮತ್ತು ರೇಷ್ಮೆ ಮಂಡಳಿ ವೃತ್ತದ ಮೂಲಕ ಹಾದುಹೋಗಲಿದೆ.
ನಾಗವಾರದಿಂದ ಗೊಟ್ಟಿಗೆರೆ ನಡುವಣ ಹೊಸ ಮಾರ್ಗ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್-ಬೆಂಗಳೂರು ಮೂಲಕ ಹಾದುಹೋಗಲಿದೆ.
ಪೂರ್ವ-ಪಶ್ಚಿಮ ಕಾರಿಡಾರ್‌ನಲ್ಲಿ ಮೊದಲನೇ ಹಂತದ ಕಾಮಗಾರಿ ಕೊನೆಗೊಂಡ ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್‌ವರೆಗೆ (15.5 ಕಿ.ಮೀ), ಮೈಸೂರು ರಸ್ತೆಯ ನಾಯಂಡಹಳ್ಳಿಯಿಂದ ಕೆಂಗೇರಿವರೆಗೆ (6.5) ಮಾರ್ಗಗಳು ವಿಸ್ತರಣೆಯಾಗಲಿವೆ.
ಉತ್ತರ-ದಕ್ಷಿಣ ಕಾರಿಡಾರ್‌ನಲ್ಲಿ ಹೆಸರಘಟ್ಟ ಅಡ್ಡರಸ್ತೆಯಿಂದ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದವರೆಗೆ (3.8 ಕಿ.ಮೀ) ಮತ್ತು ಪುಟ್ಟೇನಹಳ್ಳಿ ಅಡ್ಡರಸ್ತೆಯಿಂದ ಅಂಜನಾಪುರ ಉಪನಗರದವರೆಗೆ ಮೆಟ್ರೊ ರೈಲು ಮಾರ್ಗ ವಿಸ್ತರಣೆಗೊಳ್ಳಲಿದೆ.
ನಾಗವಾರ-ಗೊಟ್ಟಿಗೆರೆ ನಡುವಣ ಹೊಸ ಮಾರ್ಗ 21.1 ಕಿ.ಮೀ. ಉದ್ದವಿದ್ದು, 20 ನಿಲ್ದಾಣಗಳು ಬರಲಿವೆ. 18.8 ಕಿ.ಮೀ. ಉದ್ದದ ಆರ್.ವಿ.ರಸ್ತೆ-ಬೊಮ್ಮಸಂದ್ರ ನಡುವಣ ಮಾರ್ಗದಲ್ಲಿ 15 ನಿಲ್ದಾಣಗಳು ಬರುತ್ತವೆ.












Click it and Unblock the Notifications