ಯಡಿಯೂರಪ್ಪ ಮನೆಯಲ್ಲಿ ಟೀ ಬಿಸ್ಕೆಟ್ ಪಾರ್ಟಿ
ಬೆಂಗಳೂರು,
ಜ.2: ನಾನು ಮತ್ತೆ ಮುಖ್ಯಮಂತ್ರಿ ಆಗೇ ತೀರ್ತೀನಿ ಎಂದು ಪಣತೊಟ್ಟಿರುವ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೋಮವಾರ (ಜ.2) ಆಪ್ತ ಶಾಸಕರನ್ನು ತಮ್ಮ ರೇಸ್‌ಕೋರ್ಸ್ ನಿವಾಸಕ್ಕೆ ಆಹ್ವಾನಿಸಿದ್ದಾರೆ. ಶಾಸಕರಿಗೆ ಚಹಾ ಕೂಟ ಹಾಗೂ ಉಪಹಾಸ ಸೇವನೆಗೆ ಯಡಿಯೂರಪ್ಪ ಆಹ್ವಾನಿಸಿರುವುದು ರಾಜ್ಯ ರಾಜಕೀಯ ವಲಯದಲ್ಲಿ ಹಲವು ಕೂತೂಹಲಗಳಿಗೆ ಎಡೆಮಾಡಿಕೊಟ್ಟಿದೆ. id="toptextpromo">ಸೋಮವಾರ
ಬೆಳಗ್ಗೆ 11 ಗಂಟೆಗೆ ಯಡಿಯೂರಪ್ಪ ರೇಸ್‌ಕೋರ್ಸ್ ನಿವಾಸದಲ್ಲಿ ಚಹಾಕೂಟ ಹಾಗೂ ಉಪಹಾರ ಕೂಟ ಆರಂಭವಾಗಿದೆ. ಬೆಂಗಳೂರಿನ ಬಹುತೇಕ ಶಾಸಕರು ಈ ಕೂಟದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇದೀಗ ತಾನೆ ಬಂದ ಮಾಹಿತಿ ಪ್ರಕಾರ ಸಚಿವ ವಿ ಸೋಮಣ್ಣ ಹಾಗೂ ಶಾಸಕ ಸುರೇಶ್ ಗೌಡ ಚಹಾಕೂಟಕ್ಕೆ ಆಗಮಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಬಿಜೆಪಿ
ರಾಜ್ಯಾಧ್ಯಕ್ಷ ಕೆ ಎಸ್ ಈಶ್ವರಪ್ಪ ಹಾಗೂ ಯಡಿಯೂರಪ್ಪ ನಡುವಿನ ಮುಸುಕಿನ ಗುದ್ದಾಟ ಕುತೂಹಲ ಹಂತ ತಲುಪಿದ್ದು ಯಡ್ಡಿ ಇನ್ಯಾವ ತಂತ್ರ ಹೂಡಲಿದ್ದಾರೆ ಎಂಬ ಬಗ್ಗೆ ಕುತೂಹಲ ಸಹಜವಾಗಿಯೇ ಉಂಟಾಗಿದೆ. (ಒನ್‌ಇಂಡಿಯಾ ಕನ್ನಡ)











Click it and Unblock the Notifications