ಚಿಕ್ಕಮಗಳೂರಲ್ಲಿ ಭಗ್ನಪ್ರೇಮಿಯಿಂದ ಪ್ರಿಯತಮೆಯ ಹತ್ಯೆ

ನಗರದ ತಾಲೂಕು ಕಚೇರಿಯ ಅಕ್ಷರ ದಾಸೋಹ ವಿಭಾಗದಲ್ಲಿ ಕಂಪ್ಯೂಟರ್ ಆಪರೇಟರ್ ಆಗಿದ್ದ ನಯನಾ ಎಂಬ 22 ವರ್ಷದ ಯುವತಿಯೇ ಹತ್ಯೆಗೀಡಾದವಳು. ಕತ್ತು ಸೀಳಿದ ಸುಬ್ರಮಣ್ಯ ಪರಾರಿಯಾಗಿದ್ದಾನೆ. ಹೊಸ ವರ್ಷದ ಮುನ್ನಾದಿನ ಚಿಕ್ಕಮಗಳೂರಿನಲ್ಲಿ ಈ ಘಟನೆ ಕಪ್ಪುಛಾಯೆಯನ್ನು ಮೂಡಿಸಿದೆ.
ದಂಟರಮಕ್ಕಿ ನಿವಾಸಿಯಾಗಿರುವ ಸುಬ್ರಮಣ್ಯ ಅನೇಕ ವರ್ಷಗಳಿಂದ ನಯನಾಳನ್ನು ಪ್ರೇಮಿಸುತ್ತಿದ್ದ. ಆದರೆ, ಆಕೆ ಪ್ರೇಮವನ್ನು ನಿರಾಕರಿಸುತ್ತಿದ್ದಲೇ ಬಂದಿದ್ದಳು. ನಯನಾಳ ತಿರಸ್ಕಾರದಿಂದ ರೊಚ್ಚಿಗೆದ್ದ ಸುಬ್ರಮಣ್ಯ ಇಂದು ನಯನಾ ಕೆಲಸ ಮಾಡುತ್ತಿದ್ದ ಕಚೇರಿಗೆ ಬಂದು, ನಯನಾ ಕೆಲಸ ಮುಗಿಸಿ ಹೊರಬರುತ್ತಿದ್ದಂತೆ ಚೂರಿಯಿಂದ ಕತ್ತು ಕತ್ತರಿಸಿಹಾಕಿದ್ದಾನೆ.
ಈ ಘಟನೆ ನಡೆದಾಗ ದಾರಿಹೋಕರು ಆಕೆ ರಕ್ಷಣೆಗೆ ಬರಲಿಲ್ಲ ಮತ್ತು ಸುಬ್ರಮಣ್ಯನನ್ನು ಹಿಡಿಯಲು ಯತ್ನಿಸಲಿಲ್ಲ. ಎಲ್ಲರು ಸ್ತಂಭೀಭೂತರಾದಂತೆ ನಿಂತಿದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. ನಯನಾಳನ್ನು ಕೂಡಲೆ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ದಾರಿಯಲ್ಲಿಯೇ ಆಕೆ ಕೊನೆಯುಸಿರೆಳೆದಿದ್ದಾಳೆ.












Click it and Unblock the Notifications