ಸದಾನಂದ ಗೌಡರ ಮೇಲೆ ಯಡ್ಡಿಗೆ ಭಾರಿ ಸಿಟ್ಟು

ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪನವರೊಂದಿಗೆ ಸೇರಿಕೊಂಡು ನಾಯಕತ್ವದ ಕುರಿತು ಬಿಕ್ಕಟ್ಟಿಗೆ ಸಂಬಂಧಿಸಿ ವರಿಷ್ಠರಿಗೆ ದೂರು ನೀಡಿ ಸದಾನಂದ ಗೌಡ ತಪ್ಪು ಮಾಡಿದ್ದಾರೆ. ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ರೇಸ್‌ಕೋರ್ಸ್ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ನಡೆದ ಬೆಂಬಲಿಗರೊಂದಿಗಿನ ಸಭೆಯಲ್ಲಿ ಯಡಿಯೂರಪ್ಪ ಹೇಳಿದ್ದಾರೆ.
ದೆಹಲಿಗೆ ಅಷ್ಟು ತುರ್ತಾಗಿ ತೆರಳಿದ್ದೇಕೆ? ರಾಜೀನಾಮೆ ನೀಡಿದ್ದೇಕೆ? ನಾಯಕತ್ವದ ಕುರಿತು ವರಿಷ್ಠರಿಗೆ ದೂರು ನೀಡುವ ಅಗತ್ಯವೇನಿತ್ತು? ಈಶ್ವರಪ್ಪ ಅವರ ತಾಳಕ್ಕೆ ಕುಣಿಯುತ್ತಿರುವುದೇಕೆ? ಎಂಬ ಅನೇಕ ಪ್ರಶ್ನೆಗಳನ್ನು ಹೊತ್ತುಕೊಂಡು ನಡೆದ ಸಭೆಯಲ್ಲಿ ರೇಣುಕಾಚಾರ್ಯ, ಮುರುಗೇಶ್ ನಿರಾಣಿ, ಸೋಮಣ್ಣ, ಶಾಸಕರಾದ ಸುರೇಶ್ ಗೌಡ, ಹರೀಶ್ ಮತ್ತಿತರರು ಭಾಗವಹಿಸಿದ್ದರು.
ನಾನು ಯಾವುದೇ ಪಿತೂರಿ ನಡೆಸಿಲ್ಲ. ನಾನು ಯಡಿಯೂರಪ್ಪ ವಿರೋಧಿಯಲ್ಲ. ನಿಮ್ಮ ವಿರುದ್ಧ ಯಾವುದೇ ದೂರು ನೀಡಿಲ್ಲ, ಸ್ಥಾನವನ್ನು ಭದ್ರಗೊಳಿಸಲೂ ಹೋಗಿಲ್ಲ ಎಂದು ಯಡಿಯೂರಪ್ಪರಿಗೆ ಸದಾನಂದ ಗೌಡರು ಮನವಿ ಮಾಡಿದ್ದಾರೆ.












Click it and Unblock the Notifications