ಯಡಿಯೂರಪ್ಪ ವಿರುದ್ಧ ಕಠಿಣ ಕ್ರಮಕ್ಕೆ ಈಶ್ವರಪ್ಪ ಆಗ್ರಹ?
ಶಿವಮೊಗ್ಗ,
ಡಿ.30: ತಮ್ಮ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಸೂಕ್ತ ತಿರುಗೇಟು ನೀಡಲು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಗುಪ್ತ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಯಡಿಯೂರಪ್ಪ ಬೆಂಗಳೂರಿನಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ 'ನನ್ನನ್ನು ಜೈಲಿಗೆ ಅಟ್ಟಿದ್ದು ಈಶ್ವರಪ್ಪಾನೇ' ಎಂದು ಅವರ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದರು. id="toptextpromo">ಈಶ್ವರಪ್ಪ
ಅವರು ಇದರಿಂದ ತೀವ್ರ ಮನನೊಂದಿಂದ್ದು, ನಗರದ ಮಲ್ಲೇಶ್ವರದಲ್ಲಿರುವ ಮನೆಯಿಂದ ಇಡೀ ದಿನ ಹೊರಬರಲಿಲ್ಲ. ಅವರ ಅಧಿಕೃತ ಮೊಬೈಲ್ ಸಹ ಸ್ವಿಚ್ ಆಫ್ ಆಗಿದೆ. ಈ ಮಧ್ಯೆ ಅವರು ಇಂದು (ಶುಕ್ರವಾರ) ಪ್ರತಿಕ್ರಿಯೆ ನೀಡಲಿದ್ದಾರೆ ಎಂದು ಅವರ ಆಪ್ತರು ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಮತ್ತೊಂದೆಡೆ,
ಈಶ್ವರಪ್ಪ ತಮ್ಮ ಆಪ್ತರ ಮೂಲಕ ಸಂಘ-ಪರಿವಾರದ ಮುಖಂಡರ ಬಳಿ ಚರ್ಚೆ ನಡೆಸುತ್ತಿದ್ದು, ಪಕ್ಷದ ವರಿಷ್ಠರಿಗೂ ಮಾಹಿತಿ ನೀಡಿದ್ದಾರೆನ್ನಲಾಗಿದೆ. ಯಡಿಯೂರಪ್ಪ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಲು ನಿರ್ಧರಿಸಿದ್ದಾರೆಂದು ಮೂಲಗಳು ಹೇಳಿವೆ. ಜೊತೆಗೆ ಯಡಿಯೂರಪ್ಪಗೆ ನೇರವಾಗಿ ತಿರುಗೇಟು ನೀಡಲು ಸಿದ್ಧತೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.











Click it and Unblock the Notifications