ಮಧು ನನ್ನನ್ನು ಸಮಾಧಿ ಸ್ಥಳದಿಂದ ಹೊರದಬ್ಬಿದ

ಆದರೆ ಅವ ಅದನ್ನು ತನ್ನ ಪರವಾಗಿ ತಿರುಗಿಸಿಕೊಂಡು 'ಮಧು ನನ್ನನ್ನು ಸಮಾಧಿ ಸ್ಥಳದಿಂದ ಹೊರದಬ್ಬಿದ' ಅಂತ ಕತೆ ಕಟ್ಟಿದ. ನಡೆದಿದ್ದು ಇಷ್ಟೇ ಎಂದು ಮಧು ಸ್ಪಷ್ಟನೆ ನೀಡಿದ್ದಾರೆ. ನಂತರ, ಹಿರಿಯ ಮಗನಾಗಿ ಅಪ್ಪನ ಕಾರ್ಯ ನೆರವೇರಿಸಲು ಅವಕಾಶ ಕೊಡಿ ಎಂದು ಟಿವಿಗಳಲ್ಲಿ ಅಂಗಾಲಾಚಿದ್ದಾನೆ. ಅಮ್ಮನಾದರೂ ನನ್ನನ್ನು ಕರೆಯಬಹುದಿತ್ತಲ್ಲಾ? ಎಂದು ಪ್ರಶ್ನಿಸಿದ್ದಾನೆ.
ಆದರೆ ಇದು ಯಾವುದೋ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ ಎಂದು ಭಾವಿಸಿ, ಆತ ಈ ಡೈಲಾಗ್ ಹೊಡೆದಿರಬಹುದು. ಅಷ್ಟಕ್ಕೂ ಇದು ಫ್ಯಾಮಿಲಿ ಡಿಸಿಷನ್. ಅಮ್ಮನ ಆಣತಿಯಂತೆ ನಡೆಯುತ್ತಿರುವ ಮಗ ನಾನು ಅಷ್ಟೆ. ನಾವು ಅವನಿಂದ ಅಪ್ಪನಿಗೆ ಗೌರವ ಸಲ್ಲಿಸುವ ಹಕ್ಕನ್ನು ಕಸಿದುಕೊಂಡಿಲ್ಲ. ಆದರೆ ಆ ಕರ್ತವ್ಯದ ಹಕ್ಕನ್ನು ಅವನು ಪಡೆದುಕೊಂಡು ಬಂದಿಲ್ಲ. ಅದು ಅವನ ಕರ್ಮ ಎಂದು ಮಧು ತಮ್ಮ ಮನದಾಳದ ಮಾತನ್ನು ಹೇಳಿದ್ದಾರೆ.
ಇಷ್ಟೆಲ್ಲ ಆದ ಮೇಲೆ ನಾಡಿನ ಜನ ಕೇಳುತ್ತಿದ್ದಾರೆ - ಬಂಗಾರದಂತಹ ಕುಟುಂಬ ಒಡೆದು ಹೋಗಿದೆ. ಬೀದೀಲಿ ನಿಂತು ಅಣ್ಣ-ತಮ್ಮ ಕಿತ್ತಾಡ್ತಿದ್ದಾರೆ ಎಂದು ಕಟಕಿಯಾಡುತ್ತಿದ್ದಾರೆ. ಆದರೆ ನಮ್ಮ ಕುಟುಂಬ ಒಡೆದಿಲ್ಲ. ನಾನು ನನ್ನ ತಾಯಿ. ಅಕ್ಕ-ತಂಗಿಯರು, ಬಾವಂದಿರು ಹೀಗೆ ಇಡೀ ಕುಟುಂಬ ಒಗ್ಗಟ್ಟಾಗಿದೆ. ಯಾವುದೋ ಒಂದು ಭಾಗ, ಒಂದು ತುಣುಕು (ವಸಂತ) ಕಳಚಿಕೊಂಡಿದೆಯಷ್ಟೆ ಎಂದು ಮಧು ಸಮಾಧಾನದ ಮಾತು ಹೇಳಿದ್ದಾರೆ. (ಮುಂದೆ ಓದಿ ...)












Click it and Unblock the Notifications