ಚೆನ್ನೈ ಚಂಡಮಾರುತ, ಬೆಂಗ್ಳೂರಲ್ಲಿ ಭಾರೀ ಮಳೆ

ತಮಿಳುನಾಡು ಕರಾವಳಿಯಲ್ಲಿ ರಾತ್ರಿ ವೇಳೆ ಎತ್ತರದ ಅಲೆಗಳು ಎದ್ದು ಆತಂಕದ ಛಾಯೆಯನ್ನು ಮೂಡಿಸಿದೆ. ಆಂಧ್ರ ಪ್ರದೇಶದ ನೆಲ್ಲೂರು ಮತ್ತು ತಮಿಳುನಾಡಿನ ಕಡಲೂರ್ ನಡುವಿನ ಕರಾವಳಿ ತೀರಗಳಲ್ಲಿ ವಾಸಿಸುವ ಜನಕ್ಕೆ ಕಟ್ಟೆಚರ ನೀಡಲಾಗಿದೆ.
ಬಂಗಾಳ ಕೊಲ್ಲಿಯ ಆಗ್ನೇಯ ಮತ್ತು ನೈಋತ್ಯ ತೀರದಲ್ಲಿ ಚಂಡಮಾರುತದ ಪ್ರಭಾವವಿದೆ ಮತ್ತು ಚೆನ್ನೈನಿಂದ ಪೂರ್ವ ನೈಋತ್ಯಕ್ಕೆ ಸುಮಾರು 600 ಕಿ.ಮೀ. ದೂರದಲ್ಲಿ ಈ ಚಂಡಮಾರುತ ಕೇಂದ್ರೀಕೃತವಾಗಿದ್ದು, ಚೆನ್ನೈ ಕಡೆಗೆ ಮಾರುತಗಳು ಹರಿದು ಬರುತ್ತಿದೆ ಎಂದು ಇಲಾಖೆ ಹೇಳಿದೆ.
ಚಂಡಮಾರುತವು ಪಶ್ಚಿಮ ವಾಯವ್ಯಕ್ಕೆ ಚಲಿಸುವ ಸಾಧ್ಯತೆಗಳಿವೆ. ಮುಂದಿನ 24 ಗಂಟೆಗಳಲ್ಲಿ ಉತ್ತರ ತಮಿಳು ನಾಡು ಮತ್ತು ದಕ್ಷಿಣ ಆಂಧ್ರ ಪ್ರದೇಶದ ಕರಾವಳಿ ತೀರದಲ್ಲಿ ಚಂಡ ಮಾರುತದ ಒತ್ತಡದ ತೀವ್ರತೆ ಅಧಿಕಗೊಳ್ಳುವ ಸಾಧ್ಯತೆಯಿದೆ.
ನೆಲ್ಲೂರು, ಪ್ರಕಾಶಂ ಮತ್ತು ಶ್ರೀಕಾಕುಳಂ ಜಿಲ್ಲೆಗಳ ಸಮುದ್ರ ತೀರದಲ್ಲಿ 8 ರಿಂದ 10 ಅಡಿ ಎತ್ತರದ ಅಲೆಗಳು ಎದ್ದಿವೆ ಎಂದು ಹೇಳಲಾಗಿದೆ. ಹೊಸ ವರ್ಷ ಸಂಭ್ರಮದ ನಿರೀಕ್ಷೆಯಲ್ಲಿರುವ ಕರ್ನಾಟಕಕ್ಕೆ ಇದು ಕಹಿ ಸುದ್ದಿ. ಮುಂದಿನ ಮೂರು ದಿನ ಮಳೆ ಬೀಳಿಸದಿರು ಶಿವನೇ.












Click it and Unblock the Notifications