ಡಿ.30 ರಿಂದ ಜ.9ರವರೆಗೆ ವಾರ್ಷಿಕ ಅವರೆ ಮೇಳ

ಅವರೆಕಾಯಿ ಇಡ್ಲಿ, ದೋಸೆ, ಪಾಯಸ, ಚಕ್ಕುಲಿ, ನಿಪ್ಪಟ್ಟು, ಸಿಹಿ, ಖಾರ ತಿನಿಸುಗಳು ಸವಿಯಲು ತಪ್ಪದೇ ಭೇಟಿ ಕೊಡಿ ಎಂದು ಆಯೋಜಕಿ ಗೀತಾ ಶಿವಕುಮಾರ್ ಹೇಳಿದ್ದಾರೆ.
ಮಾಗಡಿ ತಾಲೂಕಿನ ರೈತರು ತಾವು ಬೆಳೆದ ಸುಮಾರು ಒಂಭತ್ತು ಟನ್ ಗಳಿಗೂ ಅಧಿಕ ಅವರೇಕಾಯಿಯನ್ನು ನೇರವಾಗಿ ಖರೀದಿಸಬಹುದಾಗಿದೆ. ಅವರೆ ಮೇಳವನ್ನು ಕೊಳದ ಮಠ ಸಂಸ್ಥಾನದ ಶ್ರೀ ಶಾಂತವೀರ ಮಹಾಸ್ವಾಮಿ ಉದ್ಘಾಟಿಸಲಿದ್ದಾರೆ.
ಬಿಬಿಎಂಪಿ ಮಹಾಪೌರರಾದ ಶಾರದಮ್ಮ, ಸಾರಿಗೆ ನಿಗಮದ ಮಾಜಿ ಅಧ್ಯಕ್ಷ ಆರ್ ವಿ ದೇವರಾಜ್, ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ, ಶಾಸಕ ರಾಮಲಿಂಗಾರೆಡ್ಡಿ, ನಟಿ ತಾರಾ, ಶಾಸಕ ಕೃಷ್ಣ ಭೈರೇಗೌಡ ಮುಂತಾದ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಆಯೋಜಕರು ಹೇಳಿದ್ದಾರೆ.












Click it and Unblock the Notifications