6534 ಕೋಟಿ ರು ಆದಾಯ ತೆಗೆದ ಸಚಿವ ರೇಣುಕಾ

ಕಳೆದ ವರ್ಷ ಇದೇ ಆವಧಿಯಲ್ಲಿ 5523 ಕೋಟಿ ರು ಆದಾಯ ಸಂಗ್ರಹಿಸಿತ್ತು. ಮುಂದಿನ ಆರ್ಥಿಕ ವರ್ಷದಲ್ಲಿ ಸುಮಾರು 10,000 ಕೋಟಿ ಆದಾಯ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಇಲಾಖೆ ಶೇ.71 ರಷ್ಟು ಪ್ರಗತಿ ಸಾಧಿಸಿದೆ ಎಂದು ಸಚಿವ ರೇಣುಕಾಚಾರ್ಯ ಹೇಳಿದರು.
ವರ್ಷದ ಆರಂಭದಲ್ಲಿ ರಾಜ್ಯದಲ್ಲಿ 875 ಕಳ್ಳಭಟ್ಟಿ ಕೇಂದ್ರಗಳಿತ್ತು. ನಿರಂತರ ದಾಳಿ ನಡೆಸಿ ಸುಮಾರು 400 ಕಳ್ಳಭಟ್ಟಿ ಕೇಂದ್ರಗಳನ್ನು ನಾಶ ಮಾಡಲಾಗಿದೆ. ಉಳಿದ ಕೇಂದ್ರಗಳ ಮೇಲೆ ದಾಳಿ ನಡೆಸಲಾಗುವುದು.
ಸುಮಾರು 11 ಜಿಲ್ಲೆಗಳನ್ನು ಈಗ ಕಳ್ಳಭಟ್ಟಿ ಮುಕ್ತ ಜಿಲ್ಲೆಗಳಾಗಿ ಪರಿವರ್ತಿಸಲಾಗಿದೆ ಎಂದು ರೇಣುಕಾಚಾರ್ಯ ಹೇಳಿದರು.












Click it and Unblock the Notifications