ಚಕ್ಕರ್ ಹೊಡೆದ ಸಂಸದರ ಮೇಲೆ ಕಾಂಗ್ರೆಸ್ ಕಿಡಿ
ನವದೆಹಲಿ,
ಡಿ.28: ಲೋಕಸಭೆಯಲ್ಲಿ ಲೋಕಪಾಲ ಮಸೂದೆಗೆ ಮಂಗಳವಾರ ತಡ ರಾತ್ರಿ ಧ್ವನಿಮತದ ಮೂಲಕ ಅಂಗೀಕಾರ ಸಿಕ್ಕಿದೆ. ಆದರೆ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ರೂಪಿಸಲಾದ ಲೋಕಪಾಲ ಸಂಸ್ಥೆಗೆ ಸಂವಿಧಾನಾತ್ಮಕ ಸ್ಥಾನಮಾನ ನೀಡುವ ಸಂವಿಧಾನ ತಿದ್ದುಪಡಿ ಮಸೂದೆಗೆ ಅಂಗೀಕಾರ ಸಿಗದೆ ಯುಪಿಎ ಸರ್ಕಾರ ಮುಖಭಂಗ ಅನುಭವಿಸಿದೆ. id="toptextpromo">ಒಟ್ಟು
427 ಸದಸ್ಯರು ಸದನದಲ್ಲಿ ಹಾಜರಿದ್ದರು. ಸಂವಿಧಾನ ತಿದ್ದುಪಡಿ ಮಸೂದೆ ಪರವಾಗಿ 247, ವಿರುದ್ಧವಾಗಿ 178 ಮತಗಳು ಬಂದವು. ಇಬ್ಬರು ಮತದಾನದಿಂದ ಹೊರಗುಳಿದರು. ಯಾವುದೇ ಸಂವಿಧಾನ ತಿದ್ದುಪಡಿ ಮಸೂದೆ ಅಂಗೀಕಾರಕ್ಕೆ 2/3ರಷ್ಟು ಬಹುಮತ ಅಗತ್ಯ. ಅದರಂತೆ 284 ಮತಗಳು ಬರಬೇಕಿತ್ತು. id='are-slot-1' class='oiad oi-axt oiadv'> id='top-searched-articles'>ಆದರೆ,
ಯುಪಿಎ ಸರ್ಕಾರದ ಸಂಸದರು ಗೈರು ಹಾಜರಾಗಿದ್ದರು. ಬಹುಜನ ಸಮಾಜವಾದಿ ಪಕ್ಷ ಹಾಗೂ ಸಮಾಜವಾದಿ ಪಕ್ಷದ ಸಂಸದರು ಗೈರು ಹಾಜರಾಗಿದ್ದು ಯುಪಿಎಗೆ ಮುಳುವಾಯಿತು. ಸುಮಾರು 25 ಸಂಸದರಿಗೆ ಈಗ ಷೋಕಾಸ್ ನೋಟಿಸ್ ನೀಡಿ ಗೈರು ಹಾಜರಿಗೆ ಉತ್ತರಿಸುವಂತೆ ಕೇಳಲು ಕಾಂಗ್ರೆಸ್ ಮುಂದಾಗಿದೆ.











Click it and Unblock the Notifications